ಕರ್ನಾಟಕ

karnataka

ETV Bharat / elections

ಮೈತ್ರಿ ಪಕ್ಷಕ್ಕೆ ತಲೆನೋವಾದ ಬಿಬಿಎಂಪಿ ಬೈ ಎಲೆಕ್ಷನ್​... ಅಂತಿಮಗೊಳ್ಳದ ಅಭ್ಯರ್ಥಿ ಆಯ್ಕೆ

ಬಿಬಿಎಂಪಿಯ ಕಾವೇರಿಪುರ ಹಾಗೂ ಸಗಾಯಿಪುರ ವಾರ್ಡ್​​ಗಳಿಗೆ ಮೇ 29 ರಂದು ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದಲ್ಲಿ ಗೊಂದಲವುಂಟಾಗಿದೆ.

By

Published : May 12, 2019, 2:45 AM IST

ಮೈತ್ರಿ ಪಕ್ಷಕ್ಕೆ ತಲೆನೋವಾದ ಬಿಬಿಎಂಪಿ ಉಪಚುನಾವಣೆ

ಬೆಂಗಳೂರು : ಇದೇ ತಿಂಗಳಲ್ಲಿ ಬಿಬಿಎಂಪಿಯ ಎರಡು ವಾರ್ಡ್​​ಗಳಿಗೆ ಉಪಚುನಾವಣೆ ನಡೆಯಲಿದೆ. ಅಕಾಲಿಕ ಮರಣ ಹೊಂದಿದ ಪಾಲಿಕೆ ಸದಸ್ಯರ ಜಾಗಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಟಿಕೆಟ್​ಗಾಗಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮೈತ್ರಿ ಪಕ್ಷಗಳ ನಡುವೆ ಒಳಜಗಳ ಆರಂಭವಾಗಿದ್ದು, ಲಾಭ ಪಡೆಯಲು ಬಿಜೆಪಿ ಮುಂದಾಗಿದೆ.

ಬಿಬಿಎಂಪಿಯ ಕಾವೇರಿಪುರ ಹಾಗೂ ಸಗಾಯಿಪುರ ವಾರ್ಡ್​​ಗಳಿಗೆ ಮೇ 29 ರಂದು ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದಲ್ಲಿ ಗೊಂದಲವುಂಟಾಗಿದೆ. ಎರಡೂ ವಾರ್ಡ್​​ಗಳಲ್ಲಿ ಅನುಕಂಪದ ಆಧಾರದ ಮೇಲೆ ಮೃತ ಸದಸ್ಯರ ಕುಟುಂಬದವರಿಗೆ ಟಿಕೆಟ್ ನೀಡುವ ಬಗ್ಗೆ ಪರ-ವಿರುದ್ಧ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಟಿಕೆಟ್​ಗಾಗಿ ಮಾಜಿ ಪಾಲಿಕೆ ಸದಸ್ಯರು ಎರಡೂ ಪಕ್ಷಗಳ ಮುಖಂಡರ ಬೆನ್ನು ಬಿದ್ದಿದ್ದಾರೆ.

ಸಹೋದರಿ ಜಯಲಕ್ಷ್ಮಮ್ಮ ಅವರಿಗೆ ಜೆಡಿಎಸ್​ನಿಂದ ಟಿಕೆಟ್ ದೊರೆಯುತ್ತದೆ ಎಂದು ಮೃತ ರಮೀಳಾ ಪತಿ ಉಮಾಶಂಕರ್ ಭಾವಿಸಿದ್ದರು. ಆದರೆ, ಜೆಡಿಎಸ್ ವರಿಷ್ಠರು ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ನಗರ ಘಟಕ ಅಧ್ಯಕ್ಷ ಪ್ರಕಾಶ್ ಅವರಿಗೆ ವಹಿಸಿದ್ದು, ಯಾವುದೇ ಕಾರಣಕ್ಕೂ ಉಮಾಶಂಕರ್ ಸಂಬಂಧಿಕರಿಗೆ ಟಿಕೆಟ್ ನೀಡಲಾಗುವುದಿಲ್ಲ ಎಂದಿದ್ದಾರೆ. ಹೀಗಾಗಿ ಇನ್ನೂ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಆದರೆ ಸಗಾಯಪುರ ವಾರ್ಡ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೃತ ಏಳುಮಲೈ ತಂಗಿ ಪಳನಿಯಮ್ಮಾಳ್ ಅವರಿಗೆ ಟಿಕೆಟ್ ಕೊಡುವುದು ನಿಶ್ಚಿತವಾಗಿದ್ದು, ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಆದರೆ ಈ ನಡುವೆ ಏಳುಮಲೈ ಪತ್ನಿಯೂ ಟಿಕೆಟ್ ಆಕಾಂಕ್ಷಿಯಾಗಿರುವುದು ಕಾಂಗ್ರೆಸ್​ಗೆ ತಲೆನೋವಾಗಿದೆ. ಅಲ್ಲದೆ ಮಾರಿಮುತ್ತು ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದರಿಂದ, ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ. ಇನ್ನು ಕಾವೇರಿಪುರಂ ವಾರ್ಡ್ ನ ಜೆಡಿಎಸ್ ಪಕ್ಷದ ಒಳಜಗಳ ಲಾಭಮಾಡಿಕೊಳ್ಳಲು ಯೋಜನೆ ರೂಪಿಸಿರುವ ಬಿಜೆಪಿ, ಮಾಜಿ ಪಾಲಿಕೆ ಸದಸ್ಯ ಚನ್ನಪ್ಪ ಅವರ ಪುತ್ರಿ ಪಲ್ಲವಿ ಕಣಕ್ಕಿಳಿಸಲು ಯೋಜನೆ ರೂಪಿಸಿದ್ದಾರೆ.

ಜತೆಗೆ ಉಮಾಶಂಕರ್ ಅವರನ್ನು ಬಿಜೆಪಿಗೆ ಸೆಳೆಯುವ ಮೂಲಕ ಮೈತ್ರಿ ಆಡಳಿತಕ್ಕೆ ಹಿನ್ನಡೆಯುಂಟು ಮಾಡಲು ಮುಂದಾಗಿದೆ ಎನ್ನಲಾಗಿದೆ. ಇನ್ನು ಸಗಾಯಪುರಂನಲ್ಲಿ ಪೌರಕಾರ್ಮಿಕರ ಮುಖಂಡರೊಬ್ಬರನ್ನು ಕಣಕ್ಕಿಳಿಸಲು ಬಿಜೆಪಿ ಯೋಜನೆ ರೂಪಿಸಿದ್ದು, ಆ ಮೂಲಕ ಮತಗಳನ್ನು ಹೊಡೆಯಲು ತಂತ್ರ ರೂಪಿಸಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎರಡೂ ಪಕ್ಷಗಳಲ್ಲಿ ಉಂಟಾಗಿರುವ ಒಳಜಗಳದ ಲಾಭ ಪಡೆಯಲು ಬಿಜೆಪಿ ಸದ್ದಿಲ್ಲದೆ ಯೋಜನೆ ರೂಪಿಸಿದ್ದು, ಎರಡೂ ವಾರ್ಡ್ಗಳಲ್ಲಿ ಗೆಲ್ಲುವ ಮೂಲಕ ಪಾಲಿಕೆಯಲ್ಲಿ ತಮ್ಮ ಬಲವನ್ನು 101 ರಿಂದ 103ಕ್ಕೆ ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ABOUT THE AUTHOR

...view details