ಬಳ್ಳಾರಿ:ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರವಾಗಿ ಶಾಸಕ ಜಿ.ಸೋಮಶೇಖರ ರೆಡ್ಡಿ ನಗರದಲ್ಲಿಂದು ಬಿರುಸಿನ ಪ್ರಚಾರ ಕೈಗೊಂಡರು. ಸತ್ಯನಾರಾಯಣ ಪೇಟೆಯಲ್ಲಿರುವ 18ನೇ ವಾರ್ಡಿನ ವಿವಿಧೆಡೆ ಕಮಲದ ಗುರುತಿಗೆ ಮತ ಹಾಕಬೇಕೆಂದು ಶಾಸಕ ರೆಡ್ಡಿ ಮತದಾರರಲ್ಲಿ ವಿನಂತಿಸಿಕೊಂಡರು.
ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸೋಮಶೇಖರ್ ರೆಡ್ಡಿ ಬಿರುಸಿನ ಪ್ರಚಾರ - kannada news
ಈ ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು. ಮೋದಿಯವರಿಗೆ ಶಕ್ತಿ ತುಂಬಲು ಈ ಬಾರಿಯೂ ಕೂಡ ಬಿಜೆಪಿಯನ್ನ ಬೆಂಬಲಿಸಬೇಕೆಂದು ಜಿ.ಸೋಮಶೇಖರ ರೆಡ್ಡಿ ಮನವಿ.
ಈ ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು. ಮೋದಿಯವರಿಗೆ ಶಕ್ತಿ ತುಂಬಲು ಈ ಬಾರಿಯೂ ಕೂಡ ಬಿಜೆಪಿಯನ್ನ ಬೆಂಬಲಿಸಬೇಕೆಂದು ರೆಡ್ಡಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ದೇವೇಂದ್ರಪ್ಪನವರ ಕುಟುಂಬಸ್ಥರು ಮತ್ತು ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀ ನಿವಾಸ ಮೋತ್ಕರ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಶಶಿಕಲ, ಶಾಸಕರ ಆಪ್ತ ಸಹಾಯಕ ರಾಜು ಮುತ್ತಿಗೆ, ಮುಖಂಡರಾದ ಕೆ.ಎಸ್.ದಿವಾಕರ, ವೀರಶೇಖರ ರೆಡ್ಡಿ, ಕೆ.ಎಸ್.ಅಶೋಕ, ಕಲ್ಲೂರರಾವ್, ಸಿಮೆಂಟ್ ಗಿರಿ, ಪದ್ಮಾವತಿ, ಜ್ಯೋತಿ ಪ್ರಕಾಶ, ಅಂಕಲಮ್ಮ, ರಾಜೇಶ ಹುಂಡೇಕರ, ಅಮರ ಉಪಸ್ಥಿತರಿದ್ದರು.