ಕರ್ನಾಟಕ

karnataka

ETV Bharat / elections

ಜೆಡಿಎಸ್ ಶಾಸಕಾಂಗ ಸಭೆ:ಬಿಜೆಪಿ ಆಮಿಷಕ್ಕೆ ಬಲಿಯಾಗದಿರಲು ಸೂಚನೆ - kannada news

ಯಾವುದೇ ಅಪಪ್ರಚಾರಕ್ಕೆ ತಲೆಕಡೆಸಿಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿರಬೇಕು, ಬಿಜೆಪಿಯ ಆಮಿಷಕ್ಕೆ ಬಲಿಯಾಗಬಾರದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂಚಿಸಲಾಗಿದೆ.

ಜೆಡಿಎಸ್ ಶಾಸಕಾಂಗ ಸಭೆ

By

Published : May 24, 2019, 10:25 PM IST

ಬೆಂಗಳೂರು :ಯಾವುದೇ ಅಪಪ್ರಚಾರಕ್ಕೆ ತಲೆಕಡೆಸಿಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿರಬೇಕು. ಬಿಜೆಪಿಯ ಆಮಿಷಕ್ಕೆ ಬಲಿಯಾಗಬಾರದು. ಸಿಎಂ ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಬೆಂಬಲ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ತಿಳಿಸಿದ್ರು.

ಪಕ್ಷದ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಸತತ ಮೂರು ಗಂಟೆಗಳ ಕಾಲ ನಡೆದ ಜೆಡಿಎಸ್ ಶಾಸಕಾಂಗ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷನಾಗಿ ಸೋಲಿನ ಹೊಣೆ ಹೊರುತ್ತೇನೆ.ರಾಜೀನಾಮೆ ಕೊಡಲು ಚಿಂತಿಸಿದ್ದೆ.ಅಧ್ಯಕ್ಷನಾಗಿ ಮುಂದುವರೆಯುವಂತೆ ವರಿಷ್ಠರು ಹೇಳಿದ್ದಾರೆ.ಇಂತಹ ಸಂಕಷ್ಟ ಸ್ಥಿತಿಯಲ್ಲಿ ರಾಜೀನಾಮೆ ಬೇಡ ಎಂದು ನಿರ್ಧಾರ ಹಿಂತೆಗೆದುಕೊಂಡೆ ಎಂದರು.

ಎರಡೂ ಪಕ್ಷದ ಅಧ್ಯಕ್ಷರು ಸಮನ್ವಯ ಸಮಿತಿಯಲ್ಲಿ ಇರಬೇಕು.ಈ ಕುರಿತು ಈಗಲೂ ನನ್ನ ಒತ್ತಾಯ ಇದೇ ಆಗಿದೆ.ಪ್ರಜ್ವಲ್ ರೇವಣ್ಣ ರಾಜೀನಾಮೆ ವಿಚಾರ ಸಭೆಯಲ್ಲಿ ಚರ್ಚಿಸಿಲ್ಲ. ಪಕ್ಷ ಅಂತಹ ನಿರ್ಧಾರಕ್ಕೂ ಬರೋದಿಲ್ಲ ಎಂದರು.

ಜೆಡಿಎಸ್ ಶಾಸಕಾಂಗ ಸಭೆ

ಮಾಧ್ಯಮಗಳಲ್ಲಿ ಜೆಡಿಎಸ್ ನಿಂದ ಯಾರ್ಯಾರೋ ಹೋಗಿ ಮಾತನಾಡುತ್ತಾರೆ.ಹಾಗಾಗಿ ಪಕ್ಷದಿಂದ ವಕ್ತಾರರ ಪಟ್ಟಿ ಸಿದ್ದ ಪಡಿಸಲಾಗುತ್ತದೆ. ಅಲ್ಲೀವರೆಗೆ ಜೆಡಿಎಸ್ ನಿಂದ ಯಾರೂ ಮಾಧ್ಯಮಗಳಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ. ವರಿಷ್ಠರೇ ಈ ಬಗ್ಗೆ ಸೂಚಿಸಿದ್ದಾರೆ.ಪಟ್ಟಿ ಸಿದ್ಧವಾದ ಬಳಿಕ ಮಾಧ್ಯಮಕ್ಕೆ ನೀಡುತ್ತೇವೆ ಎಂದು ಹೇಳಿದರು.

ಬಿಜೆಪಿ ಪರ ಜೆಡಿಎಸ್‌ನವರು ಮತ ಹಾಕಿದ್ದಾರೆ ಎಂಬ ಜೆಡಿಎಸ್ ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಹಿಂದಿನ ಎಲ್ಲ ಮಾತುಗಳು ಇಂದಿಗೆ ಮುಕ್ತಾಯ. ಆ ಬಗ್ಗೆ ಯಾವುದೇ ಚರ್ಚೆ, ಕ್ರಮ ಇಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ನವರು ಹಿಂದಿನ ಎಲ್ಲ ಘಟನೆ ಮರಿಬೇಕು. ಸೋಲು ಗೆಲುವಿಗೆ ಕಾರಣ ಹುಡುಕೋದಿಲ್ಲ ಎಂದು ಹೇಳಿದರು.

ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಶಾಸಕಾಂಗ ಸಭೆಯ ಆರಂಭದಲ್ಲಿ ಮಾತನಾಡಿ, ತುಮಕೂರಿನ ಶಾಸಕರು ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಇನ್ನೂ ಸ್ವಲ್ಪ ಶ್ರಮವಹಿಸಿ ಕೆಲಸ ಮಾಡಿದ್ದರೆ ಗೆಲ್ಲಬಹುದಾಗಿತ್ತು. ಸೋತಿರುವುದಕ್ಕೆ ಪಶ್ಚಾತ್ತಾಪ ಬೇಡ. ಕಾರ್ಯಕರ್ತರು ಧೃತಿಗೆಡದೆ ಪಕ್ಷ ಸಂಘಟಿಸಿ ಎಂದು ದೇವೇಗೌಡರು ಶಾಸಕರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಚುನಾವಣೆಯಲ್ಲಿ ಗೆಲುವು ಸೋಲು ಸಹಜ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಪತನವಾಗುವುದಿಲ್ಲ. ಸಿಎಂ ಆಗಿ ಕುಮಾರಸ್ವಾಮಿ ಮುಂದುವರೆಯಲಿದ್ದಾರೆ. ಯಾವುದೇ ಆತಂಕ ಬೇಡ ಎಂದು ಗೌಡರು ಧೈರ್ಯ ತುಂಬಿದ್ದಾರೆ ಎಂದು ತಿಳಿದುಬಂದಿದೆ. ಬಹುತೇಕ ಶಾಸಕರು ಅಧಿಕಾರಿಗಳ ವರ್ಗಾವಣೆ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ಎಲ್ಲಾ ಶಾಸಕರ ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಸಚಿವ ಜಿ.ಟಿ. ದೇವೇಗೌಡರು ಅನೌಪಚಾರಿಕ ಸಂಪುಟ ಸಭೆಯಲ್ಲಿ ನಡೆದ ವಿಷಯಗಳನ್ನು ಸಭೆಯಲ್ಲಿ ವಿವರಿಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ಪಕ್ಷದ ಸಂಘಟನೆ ಹಾಗೂ ಮೈತ್ರಿ ಸರ್ಕಾರದ ಆಡಳಿತದ ಬಗ್ಗೆ ಹಾಗೂ ಜನಪರ ಕಾರ್ಯಗಳ ಬಗ್ಗೆ ಚರ್ಚೆ ಮಾಡಿದ್ದಾಗಿ ಹಲವಾರು ಶಾಸಕರು ಸಚಿವರು ಅನೌಪಚಾರಿಕವಾಗಿ ಹೇಳಿದ್ದಾರೆ. ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ಹೇಳಿದ್ದಾರೆ. ಇನ್ನು ಎಲ್ಲಾ 37 ಶಾಸಕರು ಒಗ್ಗಟ್ಟಾಗಿ ಇರುವಂತೆ ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡರು ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details