ಕರ್ನಾಟಕ

karnataka

ETV Bharat / elections

ಮೋದಿ ಬಯೋಪಿಕ್ ವಿವಾದ: ಏ. 8ರಂದು ಸುಪ್ರೀಂನಲ್ಲಿ ಅರ್ಜಿ ವಿಚಾರಣೆ - ಸುಪ್ರೀಂ ಕೋರ್ಟ್

ಮೋದಿ ಬಯೋಪಿಕ್ ರಿಲೀಸ್ ವಿಚಾರದಲ್ಲಿ ಮೂಗು ತೋರಿಸಲು ಮಧ್ಯ ಪ್ರದೇಶ, ಬಾಂಬೆ ಹಾಗೂ ದೆಹಲಿ ಹೈಕೋರ್ಟ್​ಗಳು ಹಿಂದೆ ಸರಿದ ಬಳಿಕ ಇದು ಸದ್ಯ ಸುಪ್ರೀಂ ಅಂಗಳ ತಲುಪಿದೆ.

ಮೋದಿ ಬಯೋಪಿಕ್

By

Published : Apr 4, 2019, 1:32 PM IST

ನವದೆಹಲಿ:ಬಿಡುಗಡೆ ಸಿದ್ಧವಾಗಿರುವ ಮೋದಿ ಬಯೋಪಿಕ್​​ ತಡೆ ಕೋರಿ ಕಾಂಗ್ರೆಸ್ ವಕ್ತಾರ ಅಮನ್ ಪನ್ವಾರ್ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಸದ್ಯ ಸಲ್ಲಿಕೆಯಾಗಿರುವ ಅರ್ಜಿಯನ್ನು ಸರ್ವೋಚ್ಛನ್ಯಾಯಾಲಯ ಸೋಮವಾರದಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಜಸ್ಟೀಸ್​ ಎಸ್​.ಎ.ಬೋಬ್ಡೆ ಅರ್ಜಿ ವಿಚಾರಣೆ ನಡೆಸಲಿದ್ದಾರೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಈ ಅರ್ಜಿಯನ್ನು ತ್ವರಿತ ವಿಚಾರಣೆ ನಡೆಸಬೇಕು ಎಂದು ಕೋರ್ಟ್​ನಲ್ಲಿ ಮನವಿ ಮಾಡಿದ್ದಾರೆ

ಮೋದಿ ಬಯೋಪಿಕ್ ರಿಲೀಸ್ ವಿಚಾರದಲ್ಲಿ ಮೂಗು ತೂರಿಸಲು ಮಧ್ಯ ಪ್ರದೇಶ, ಬಾಂಬೆ ಹಾಗೂ ದೆಹಲಿ ಹೈಕೋರ್ಟ್​ಗಳು ಹಿಂದೆ ಸರಿದ ಬಳಿಕ ಇದು ಸದ್ಯ ಸುಪ್ರೀಂ ಅಂಗಳ ತಲುಪಿದೆ. ಮೋದಿ ಬಯೋಪಿಕ್ ರಿಲೀಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಕಾರಣ ನೀಡಿ ಕಾಂಗ್ರೆಸ್ ಕೋರ್ಟ್​ ಮೆಟ್ಟಿಲೇರಿದೆ.

ಒಮಂಗ್ ಕುಮಾರ್ ನಿರ್ದೇಶನದ ವಿವೇಕ್ ಒಬೇರಾಯ್ ನಟನೆಯ ಮೋದಿ ಬಯೋಪಿಕ್ ಈ ಮೊದಲು ಏಪ್ರಿಲ್ 5ರಂದು ಬಿಡುಗಡೆಯಾಗಲಿದೆ ಎಂದು ತಂಡ ಹೇಳಿತ್ತು. ಪ್ರಸ್ತು ಅರ್ಜಿ ವಿಚಾರಣೆ ಸುಪ್ರೀಂನಲ್ಲಿ ಸೋಮವಾರ ನಡೆಯಲಿರುವುದರಿಂದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ.

ABOUT THE AUTHOR

...view details