ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದ್ದು ಭಾರತೀಯ ಜನತಾ ಪಾರ್ಟಿ ಈ ಬಾರಿಯ ಸ್ಲೋಗನ್ ಹಾಗೂ ಥೀಮ್ ಸಾಂಗ್ ರಿಲೀಸ್ ಮಾಡಿದೆ.
ಎಲ್ಲ ಪಕ್ಷಗಳು ಅತ್ಯಂತ ಗಂಭೀರವಾಗಿ ಈ ಬಾರಿಯ ಚುನಾವಣೆಯನ್ನು ಪರಿಗಣಿಸಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಆಡಳಿತದಲ್ಲಿರುವ ಬಿಜೆಪಿಗೆ ಪಟ್ಟ ಉಳಿಸಿಕೊಳ್ಳುವ ಒತ್ತಡದ ನಡುವೆ ತಮ್ಮ ಐದು ವರ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿವೆ.