ತುಮಕೂರು:ತಮ್ಮ ಅನೈತಿಕ ಸಂಬಂಧ ಬಹಿರಂಗವಾದ ಹಿನ್ನೆಲೆಯಲ್ಲಿ ಮಹಿಳೆ, ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊರಟಗೆರೆ ತಾಲೂಕಿನ ಬಿಡಿಪುರ ಬಳಿಯ ಗಿರಚಿಕ್ಕನಹಳ್ಳಿಯಲ್ಲಿ ನಡೆದಿದೆ.
ವೆಂಕಟಲಕ್ಷ್ಮಮ್ಮ (25), ಆನಂದ್ ಕುಮಾರ್ (27) ಆತ್ಮಹತ್ಯೆ ಮಾಡಿಕೊಂಡವರು. ಮೃತ ವೆಂಕಟಲಕ್ಷ್ಮಮ್ಮ ಎರಡು ಮಕ್ಕಳ ತಾಯಿಯಾಗಿದ್ದು, ಈಕೆಯ ಪತಿ ತಿಮ್ಮರಾಜು ಟ್ರ್ಯಾಕ್ಟರ್ ಚಾಲಕನ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದನು.
ಈತ ಟ್ರ್ಯಾಕ್ಟರ್ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಆನಂದ್ ಈತನ ಪತ್ನಿ ಪುಸಲಾಯಿಸಿದ್ದು, ಅದು ಅನೈತಿಕ ಸಂಬಂಧಕ್ಕೆ ತಿರುಗಿದೆ. ಇದು ಗ್ರಾಮಸ್ಥರಿಗೆ ತಿಳಿಯಿತು ಎಂಬ ಕಾರಣಕ್ಕೆ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.