ಕರ್ನಾಟಕ

karnataka

ETV Bharat / crime

ಕಾಲುವೆಗೆ ಉರುಳಿದ ಟ್ರ್ಯಾಕ್ಟರ್: ನಾಲ್ವರು ಸಾವು, ನಾಲ್ವರ ಸ್ಥಿತಿ ಗಂಭೀರ

ಡಿ.13 ರ ರಾತ್ರಿ 11ರ ಸುಮಾರಿಗೆ ಕರಕಂಬ ಪ್ರದೇಶದ ದೇಶಮುಖ ವಸ್ತಿ ಹತ್ತಿರವಿರುವ ಉಜನಿ ನದಿಯ 33ನೇ ನಂಬರ್ ಕಾಲುವೆ ತಿರುವಿನಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್​ನ ಟ್ರಾಲಿ ಪೂರ್ತಿಯಾಗಿ ಬುಡಮೇಲಾಗಿದ್ದು, ಅದರಲ್ಲಿ ಕುಳಿತಿದ್ದ ಅನೇಕರು ಟ್ರಾಲಿ ಕೆಳಗೆ ಸಿಕ್ಕಿಹಾಕಿಕೊಂಡಿದ್ದರು. ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದು, ಇನ್ನುಳಿದ ನಾಲ್ವರು ತೀವ್ರ ಗಾಯಗೊಂಡಿದ್ದಾರೆ.

ಕಾಲುವೆಗೆ ಉರುಳಿದ ಟ್ರ್ಯಾಕ್ಟರ್: ನಾಲ್ವರು ಸಾವು, ನಾಲ್ವರ ಸ್ಥಿತಿ ಗಂಭೀರ
Tractor fell into canal 4 dead 4 critical

By

Published : Dec 14, 2022, 12:18 PM IST

ಪಂಢರಪುರ (ಮಹಾರಾಷ್ಟ್ರ): ತಾಲೂಕಿನ ಕರಕಂಬ ಎಂಬಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕಾಲುವೆಗೆ ಟ್ರ್ಯಾಕ್ಟರ್ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.

ಬಂದ ಮಾಹಿತಿಯ ಪ್ರಕಾರ- ಡಿ.13 ರ ರಾತ್ರಿ 11ರ ಸುಮಾರಿಗೆ ಕರಕಂಬ ಪ್ರದೇಶದ ದೇಶಮುಖ ವಸ್ತಿ ಹತ್ತಿರವಿರುವ ಉಜನಿ ನದಿಯ 33ನೇ ನಂಬರ್ ಕಾಲುವೆ ತಿರುವಿನಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್​ನ ಟ್ರಾಲಿ ಪೂರ್ತಿಯಾಗಿ ಬುಡಮೇಲಾಗಿದ್ದು, ಅದರಲ್ಲಿ ಕುಳಿತಿದ್ದ ಅನೇಕರು ಟ್ರಾಲಿ ಕೆಳಗೆ ಸಿಕ್ಕಿಹಾಕಿಕೊಂಡಿದ್ದರು. ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದು, ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರೆಲ್ಲರೂ ಮಧ್ಯಪ್ರದೇಶದ ಬಡವಾಣಿ ಜಿಲ್ಲೆ ವರಲಾ ತಾಲೂಕಿನ ಕೋಲಕಿ ಎಂಬ ಊರಿಗೆ ಸೇರಿದವರಾಗಿದ್ದಾರೆ. ಮೃತರನ್ನು ಅರವಿಂದ್ ರಾಜಾರಾಂ ಕವಚೆ (2 ವರ್ಷ), ಪ್ರಿಯಾ ನವಲ್ ಸಿಂಗ್ (2 ವರ್ಷ), ಸೂರಿಕಾ ವೀರ್ ಸಿಂಗ್ ದಾವರ್ (16 ವರ್ಷ), ರಣಕ್ಬಾಯಿ ನವಲ್ ಸಿಂಗ್ ಆರ್ಯ (23 ವರ್ಷ) ಎಂದು ಗುರುತಿಸಲಾಗಿದೆ. ಇಟಾಬಾಯಿ ವೀರಸಿಂಗ್ ದಾವರ್ (55 ವರ್ಷ), ರಾಜಾರಾಂ ದೇವಸಿಂಗ್ ಕವಚೆ (23 ವರ್ಷ), ರಿಂಕು ಸುಮಾರಿಯಾ ಕವಚೆ (16 ವರ್ಷ), ಸುನೀತಾ ರಾಜಾರಾಂ ಕವಚೆ (23 ವರ್ಷ) ಗಾಯಗೊಂಡಿದ್ದಾರೆ.

ಮೃತರು ಹಾಗೂ ಗಾಯಾಳುಗಳೆಲ್ಲರೂ ಮಧ್ಯಪ್ರದೇಶದಿಂದ ಇಲ್ಲಿಗೆ ಕಬ್ಬಿನ ಕಟಾವು ಕೆಲಸಕ್ಕೆ ಬಂದ ಕೂಲಿಕಾರರಾಗಿದ್ದಾರೆ. ಗಾಯಾಳುಗಳಿಗೆ ಕರಕಂಬ ಗ್ರಾಮೀಣ ಚಿಕಿತ್ಸಾಲಯದಲ್ಲಿ ಹಾಗೂ ಸೋಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ರಸ್ತೆ ಅಪಘಾತಗಳಿಂದ 577 ಸಾವು, ಮೊದಲ ಸ್ಥಾನ ಯಲಹಂಕ ಸಂಚಾರಿ ಪೊಲೀಸ್ ಠಾಣೆಗೆ

ABOUT THE AUTHOR

...view details