ಕರ್ನಾಟಕ

karnataka

ETV Bharat / crime

ಶಾಲೆಯಲ್ಲಿ ಪ್ರೀತ್ಸೆ ಪ್ರೀತ್ಸೆ ಅಂತಾ ಬೆನ್ನುಬಿದ್ದ.. ಮನೆಗೆ ಬಂದು ಮಂಗಳಸೂತ್ರ ಕಟ್ಟಿ ಅತ್ಯಾಚಾರವೆಸಗಿದ - ಶಾಲೆಯಲ್ಲಿ ಪ್ರೀತ್ಸೆ ಪ್ರೀತ್ಸೆ ಅಂತಾ ಬೆನ್ನುಬಿದ್ದ

ವಿದ್ಯಾರ್ಥಿನಿ ಮನೆಯಲ್ಲಿ ಒಬ್ಬಳೇ ಇದ್ದಾಗ ಸ್ನೇಹಿತನು ಮನೆಗೆ ನುಗ್ಗಿ, ಬಲವಂತವಾಗಿ ಮಂಗಳಸೂತ್ರ ಕಟ್ಟಿ ಅತ್ಯಾಚಾರಾವೆಸಗಿರುವ ಪ್ರಕರಣ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

A student was threatened and raped
ವಿದ್ಯಾರ್ಥಿನಿಗೆ ಹೆದರಿಸಿ ಅತ್ಯಾಚಾರ

By

Published : Nov 12, 2022, 12:50 PM IST

ಅನಂತಪುರಂ(ಆಂಧ್ರಪ್ರದೇಶ): ಅನಂತಪುರದ ಹೈಸ್ಕೂಲ್​ ಶಾಲೆಯಲ್ಲಿ ಎರಡು ವರ್ಷದಿಂದ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೀತಿಸುವಂತೆ, ಕಿರುಕುಳ ನೀಡಿ ಅಪ್ರಾಪ್ತ ವಯಸ್ಸಿನ ಸ್ನೇಹಿತನೊಬ್ಬ ಒತ್ತಾಯಿಸುತ್ತಿದ್ದ. ಒಂದು ದಿನ ಆ ವಿದ್ಯಾರ್ಥಿ ಒಬ್ಬಳೇ ಇದ್ದುದನ್ನು ಅರಿತು ಮನೆಗೆ ನುಗ್ಗಿ, ಬಲವಂತವಾಗಿ ಮಂಗಳಸೂತ್ರ ಕಟ್ಟಿ, 'ಇನ್ಮುಂದೆ ನೀನೇ ನನ್ನ ಹೆಂಡತಿ’ ಎಂದು ಆಕೆಯನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರವೆಸಗಿರುವ ಪ್ರಕರಣ ಅನಂತಪುರದಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತು ಅನಂತಪುರಂ ದಿಶಾ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ಪೋಕ್ಸೊ ಹಾಗೂ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕರ್ನೂಲ್ ನಲ್ಲಿ ಇಂಟರ್ ಮೀಡಿಯೇಟ್(ಪಿಯುಸಿ) ಓದುತ್ತಿರುವ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾದವಳು.

ಪೊಲೀಸರು ಹೇಳುವುದೇನು: ಅನಂತಪುರದ ಶಾಲೆಯಲ್ಲಿ ಇಬ್ಬರು ಒಟ್ಟಿಗೆ ಓದುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿ ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿ ಹೆದರಿಸುತ್ತಿದ್ದ. ವಿದ್ಯಾರ್ಥಿನಿ ಪಿಯುಸಿ ವಿದ್ಯಾಭ್ಯಾಸಕ್ಕೆ ಬೇರೆಡೆ ತೆರಳಿದ್ದಳು. ಎರಡು ವರ್ಷಗಳ ನಂತರವೂ ಆಕೆಗೆ ಸ್ನೇಹಿತನಾಗಿದ್ದ ಬಾಲಕನು ಹುಡುಗಿಯೊಂದಿಗೆ ಸಂಪರ್ಕದಲ್ಲಿದ್ದ. ಒನ್​ ಸೈಡ್​ ಲವ್ ಆಗಿ​ ಪ್ರೀತ್ಸೆ ಪ್ರೀತ್ಸೆ ಅಂತಾ ಆಕೆಯ ಬೆನ್ನುಬಿದ್ದಿದ್ದ. ಇತ್ತೀಚೆಗೆ ಒಂದು ದಿನ ಯಾರೂ ಇಲ್ಲದ ವೇಳೆ ಬಾಲಕಿಯ ಮನೆಗೆ ತೆರಳಿ ಪ್ರೀತಿಸದಿದ್ದರೆ ಆಕೆಯ ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಆಗ ಅವಳು ಹೆದರಿ ಆತನೊಂದಿಗೆ ಮಾತನಾಡುತ್ತಿದ್ದಳಂತೆ.

ಪ್ರಕರಣದ ವಿವರ: ಬಾಲಕ ಇದನ್ನೇ ನೆಪವಾಗಿಟ್ಟುಕೊಂಡು ಈ ವರ್ಷದ ಜೂನ್‌ನಲ್ಲಿ ಬಾಲಕಿ ಒಬ್ಬಳೇ ಇದ್ದಾಗ ಮನೆಗೆ ನುಗ್ಗಿ ಬಲವಂತವಾಗಿ ಮಂಗಳಸೂತ್ರ ಕಟ್ಟಿದ್ದಾನೆ. 'ಇನ್ಮುಂದೆ ನೀನೇ ನನ್ನ ಹೆಂಡತಿ’ ಎಂದು ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರವೆಸಗಿದ್ದಾನೆ. ವಿದ್ಯಾರ್ಥಿನಿ ಗಾಬರಿಗೊಂಡು ಮನೆಯಲ್ಲಿ ಆ ಮಂಗಳಸೂತ್ರವನ್ನು ಬಚ್ಚಿಟ್ಟಿದ್ದಳು.

ಈಕೆ ಇತ್ತೀಚೆಗೆ ಮತ್ತೆ ದಸರಾ ರಜೆಯಲ್ಲಿ ಊರಿಗೆ ಬಂದಿದ್ದಳು. ಆಗಲೂ ಅವನು ಅವಳನ್ನು ಬಿಟ್ಟಿರಲಿಲ್ಲ. ರಜೆ ಮುಗಿಸಿ ಕಾಲೇಜಿಗೆ ತೆರಳಿದ್ದ ಬಾಲಕಿಯನ್ನು ಹಿಂಬಾಲಿಸಿ ಅಲ್ಲೇ ದೌರ್ಜನ್ಯ ಎಸಗಿದ್ದನಂತೆ. ಇತ್ತೀಚೆಗೆ ಸಂತ್ರಸ್ತೆ ತನ್ನ ತಾಯಿಗೆ ಅತ್ಯಾಚಾರ ಕುರಿತಾಗಿ ಹೇಳಿದ್ದಾಳೆ. ಪೋಷಕರು ಅನಂತಪುರಂ ದಿಶಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಗುಂಪು ಘರ್ಷಣೆ: 9 ಮಂದಿ ಪೊಲೀಸರ ವಶಕ್ಕೆ

ABOUT THE AUTHOR

...view details