ಕರ್ನಾಟಕ

karnataka

ETV Bharat / crime

ತರಬೇತಿಯಲ್ಲಿದ್ದ ಮಹಿಳಾ ಪಿಎಸ್​ಐ ಮೇಲೆ ಅತ್ಯಾಚಾರ ಯತ್ನ: ಪಿಎಸ್​ಐ ಅಮಾನತು - mehabubabad latest news

ಸೋಮವಾರ ರಾತ್ರಿ ಬೆಲ್ಲದ ಉಗ್ರಾಣದ ಮೇಲೆ ದಾಳಿ ನಡೆಸಬೇಕೆಂದು ತನ್ನ ಖಾಸಗಿ ವಾಹನದಲ್ಲಿ ಮಹಿಳಾ ಸಹೋದ್ಯೋಗಿಯನ್ನು ಕರೆದೊಯ್ದಿದ್ದ ಸಬ್‌ ಇನ್ಸ್‌ಪೆಕ್ಟರ್‌ (SI) ನಿರ್ಜನ ಪ್ರದೇಶದಲ್ಲಿ ತನ್ನ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.

SI held for 'rape' attempt on trainee policewoman in Telangana
ತರಬೇತಿಯಲ್ಲಿದ್ದ ಮಹಿಳಾ ಪಿಎಸ್​ಐ ಮೇಲೆ ಅತ್ಯಾಚಾರ ಯತ್ನ ಆರೋಪ: ಪಿಎಸ್​ಐ ಅಮಾನತು

By

Published : Aug 4, 2021, 7:20 AM IST

ಮೆಹಬೂಬಾಬಾದ್(ತೆಲಂಗಾಣ):29 ವರ್ಷದ ತರಬೇತಿಯಲಿದ್ದ ಮಹಿಳಾ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಪಿಎಸ್​​​​ಐ) ಮೇಲೆ ಅತ್ಯಾಚಾರ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಓರ್ವ ಸಬ್​​ ಇನ್ಸ್​ಪೆಕ್ಟರ್​ ಅನ್ನು ತೆಲಂಗಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಶ್ರೀನಿವಾಸರೆಡ್ಡಿ ಎಂಬ ಎಸ್​ಐ ಅನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರೂ ಒಂದೇ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳೆಯು ಪ್ರೊಬೆಷನರಿ ಪಿಎಸ್​ಐ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ವಾರಂಗಲ್​ ಪೊಲೀಸ್ ಕಮೀಷನರ್​ ತರುಣ್​ ಜೋಷಿಗೆ ಮಹಿಳೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಸೋಮವಾರ ರಾತ್ರಿ ಬೆಲ್ಲದ ಉಗ್ರಾಣದ ಮೇಲೆ ದಾಳಿ ನಡೆಸಬೇಕೆಂದು ತನ್ನ ಖಾಸಗಿ ವಾಹನದಲ್ಲಿ ಮಹಿಳಾ ಸಹೋದ್ಯೋಗಿಯನ್ನು ಕರೆದೊಯ್ದಿದ್ದ ಶ್ರೀನಿವಾಸ ರೆಡ್ಡಿ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ.

ಮಹಿಳಾ ಪಿಎಸ್​ಐ ಈ ವೇಳೆ ತೀವ್ರ ಪ್ರತಿರೋಧ ತೋರಿದ ಕಾರಣದಿಂದಾಗಿ ಆರೋಪಿ ಶ್ರೀನಿವಾಸರೆಡ್ಡಿ ಮಹಿಳೆಯನ್ನು ಆಕೆಯ ನಿವಾಸದ ಬಳಿ ತಂದು ಬಿಟ್ಟಿದ್ದಾನೆ. ಸದ್ಯಕ್ಕೆ ಮಹಿಳೆಯ ದೂರು ಆಧರಿಸಿ, ಆರೋಪಿ ಶ್ರೀನಿವಾಸರೆಡ್ಡಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ರಮ್ಮಿ ಮುಂತಾದ ಆನ್​ಲೈನ್ ಗೇಮ್​​ಗಳ ಮೇಲಿನ ನಿಷೇಧ ಹಿಂಪಡೆದ ತಮಿಳುನಾಡು

ABOUT THE AUTHOR

...view details