ಶಿವಮೊಗ್ಗ: ಲಾಕ್ಡೌನ್ ಸಮಯವನ್ನೆ ಬಳಕೆ ಮಾಡಿಕೊಂಡ ಖದೀಮರು, ಖಾಲಿ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದಾರೆ. ಶಿವಮೊಗ್ಗ ನಗರದ ಸೋಮಯ್ಯ ಲೇಔಟ್ ನಲ್ಲಿ ನಿನ್ನೆ ರಾತ್ರಿ ಮನೆಯೊಂದರ ಕಳ್ಳತನ ನಡೆದಿದೆ.
ಮನೆ ಕಳ್ಳತನ: 220 ಗ್ರಾಂ ಚಿನ್ನಾಭರಣ, 80 ಸಾವಿರ ರೂ. ನಗದು ಕದ್ದ ಖದೀಮರು - ಶಿಕ್ಷಣ ಇಲಾಖೆಯ ಪ್ರಭಾಕರ್
ಪ್ರಭಾಕರ್ ಅವರು ಕಳೆದ ಮೂರು ದಿನಗಳ ಹಿಂದೆ ಚನ್ನಗಿರಿಯ ಹೆಬ್ಬಲಗೆರೆ ಗ್ರಾಮಕ್ಕೆ ತೆರಳಿದ್ದರು. ಯಾರೂ ಇಲ್ಲದ ಸಮಯ ನೋಡಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಕಳ್ಳರು ತಮ್ಮ ಗುರುತು ಸಿಗಬಾರದೆಂದು ಮನೆಯ ತುಂಬೆಲ್ಲಾ ಕಾರದಪುಡಿ ಹಾಕಿ ಕಳ್ಳತನ ನಡೆಸಿದ್ದಾರೆ.
ಶಿಕ್ಷಣ ಇಲಾಖೆಯ ಪ್ರಭಾಕರ್ ಎಂಬುವರ ಮನೆಯಲ್ಲಿ ಕಳ್ಳರು ಕಳ್ಳತನ ನಡೆಸಿದ್ದಾರೆ. ಪ್ರಭಾಕರ್ ಅವರ ಮನೆಯಲ್ಲಿದ್ದ 220 ಗ್ರಾಂ ಚಿನ್ನಾಭರಣ ಹಾಗೂ 80 ಸಾವಿರ ರೂ. ನಗದು ಕಳ್ಳತನ ನಡೆಸಲಾಗಿದೆ.
ಪ್ರಭಾಕರ್ ಅವರು ಕಳೆದ ಮೂರು ದಿನಗಳ ಹಿಂದೆ ಚನ್ನಗಿರಿಯ ಹೆಬ್ಬಲಗೆರೆ ಗ್ರಾಮಕ್ಕೆ ತೆರಳಿದ್ದರು. ಯಾರು ಇಲ್ಲದ ಸಮಯ ನೋಡಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಕಳ್ಳರು ತಮ್ಮ ಗುರುತು ಸಿಗಬಾರದೆಂದು ಮನೆಯ ತುಂಬೆಲ್ಲಾ ಕಾರದಪುಡಿ ಹಾಕಿ ಕಳ್ಳತನ ನಡೆಸಿದ್ದಾರೆ.
ಪ್ರಭಾಕರ್ ಅವರ ಮನೆಯಲ್ಲಿ ಕಳ್ಳತನವಾಗಿದೆ ಎಂದು ಮನೆಯ ಮಾಲೀಕರು ಹೇಳಿದಾಗ ತಿಳಿದು ಬಂದಿದೆ. ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.