ಕರ್ನಾಟಕ

karnataka

ETV Bharat / crime

ಕೌಟುಂಬಿಕ ಕಲಹ: ಐದು ಅಡಿ ರಾಡ್​ನಿಂದ ಪತ್ನಿಗೆ ಚುಚ್ಚಿದ ಪತಿ

ಮಧ್ಯಪ್ರದೇಶದ ಸಿಯೋನಿ ಎಂಬಲ್ಲಿ ಭೀಕರ ಘಟನೆ - ಹಲ್ಲೆಗೊಳಗಾದ ಮಹಿಳೆ ಸ್ಥಿತಿ ಗಂಭೀರ - ಕೌಟುಂಬಿಕ ಕಲಹದಿಂದ ದುಷ್ಕೃತ್ಯ - ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು

seoni-husband-inserted-iron-rod-in-wife-body-referred-to-nagpur-in-critical-condition
ಕೌಟುಂಬಿಕ ಕಲಹ: ಐದು ಅಡಿ ರಾಡ್​ನಿಂದ ಪತ್ನಿಗೆ ಚುಚ್ಚಿದ ಪತಿ

By

Published : Jan 16, 2023, 8:21 PM IST

ಸಿಯೋನಿ (ಮಧ್ಯ ಪ್ರದೇಶ): ಗಂಡ ಹೆಂಡತಿ ನಡುವಿನ ಜಗಳದಲ್ಲಿ ಕೋಪಗೊಂಡ ಪತಿ ತನ್ನ ಪತ್ನಿಯ ದೇಹಕ್ಕೆ ಸುಮಾರು 5 ಅಡಿ ಉದ್ದದ ಕಬ್ಬಿಣದ ರಾಡ್ (ಬಾರ್)ನಿಂದ ಚುಚ್ಚಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಸಿಯೋನಿ ಎಂಬಲ್ಲಿ ನಡೆದಿದೆ. ಅಕ್ಕಪಕ್ಕದ ಮೆನಯವರು ಹಲ್ಲೆಗೊಳಗಾದ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಮಾಹಿತಿ ಪ್ರಕಾರ ಕಟಂಗಿ ಬಂಜಾರ ಬದಲ್ಪಾರ್ ಚೌಕಿ ಪೊಲೀಸ್ ಠಾಣೆ ನಿವಾಸಿ ಭಗವತಿ ಖುರೇಷಿ ಪತಿ ವಿನೋದ್ ಖುರೇಷಿ(30) ಪತ್ನಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಕೋಪದ ಭರದಲ್ಲಿ ಪತಿ ವಿನೋದ್ ತನ್ನ ಹೆಂಡತಿಗೆ 5 ಅಡಿ ಕಬ್ಬಿಣದ ರಾಡ್​ನಿಂದ ಹೊಟ್ಟೆಗೆ ಚುಚ್ಚಿದ್ದಾನೆ. ಮಹಿಳೆಯ ಚೀರಾಟವನ್ನು ಕೇಳಿ ಹೊರಗೆ ಬಂದ ಅಕ್ಕಪಕ್ಕದ ಮನೆಯವರ ಸಹಾಯದಿಂದ ತಕ್ಷಣ ಮಹಿಳೆಯನ್ನು ಸಿಯೋನಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು.

ಮಹಿಳೆಯನ್ನು ಪರೀಕ್ಷಿಸಿದ ಡಾ. ಅಭಯ್​ ಸೋನಿ ಮತ್ತು ಡಾ. ವಿನನ್ಯಾ ಪ್ರಸಾದ್​ ಎಕ್ಸ್​-ರೇ ಮಾಡಿ ಮಹಿಳೆಯ ಗಂಭೀರ ಸ್ಥಿತಿಯನ್ನು ನೋಡಿ ಹೆಚ್ಚಿನ ಚಿಕಿತ್ಸೆಗಾಗಿ ನಾಗಪುರದದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫಾರಸು ಮಾಡಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್: ದೇಹದಲ್ಲಿ 5 ಅಡಿ ಉದ್ದದ ಕಬ್ಬಿಣದ ರಾಡ್ ಇರುವುದನ್ನು ಕಂಡು ಆಸ್ಪತ್ರೆಯಲ್ಲಿ ಇದ್ದ ಉಳಿದ ರೋಗಿಗಳು ಅಘಾತಕ್ಕೊಳಗಾದರು. ಈ ಘಟನೆಯನ್ನು ಕಣ್ಣಾರೆ ಕಂಡ ಪೊಲೀಸ್ ಪೇದೆ ಸಂದೀಪ್ ದೀಕ್ಷಿತ್ ಕೂಡಲೇ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿ, ತಹಸೀಲ್ದಾರ್​ಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಹಸೀಲ್ದಾರ್ ಅಭಿಷೇಕ್ ಯಾದವ್ ಸ್ಥಳಕ್ಕಾಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು.

ಕೌಟುಂಬಿಕ ಕಲಹದಿಂದ ಘಟನೆ:ಪ್ರಕರಣದಲ್ಲಿ ಗಾಯಗೊಂಡಿರುವ ಭಗವತಿ ಖುರೇಷಿ ಅವರ ಮಾವ ಕಿಶನ್‌ಲಾಲ್ ಖುರೇಷಿ ಮಾತನಾಡಿ, “ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಹಿರಿಯ ಮಗ ವಿನೋದ್ ಮತ್ತು ಕಿರಿಯ ಮಗ ಪ್ರಮೋದ್ ಇಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದಾರೆ. ಹಿರಿಯ ಮಗ ವಿನೋದ್ ಮತ್ತು ಸೊಸೆ ಭಗವತಿ ನಡುವೆ ಯಾವ ವಿಚಾರದಲ್ಲಿ ಜಗಳವಾಗಿದೆಯೋ ಗೊತ್ತಿಲ್ಲ, ಆದರೆ ರಾಡ್​ನಲ್ಲಿ ಚುಚ್ಚಿದ್ದಾನೆ ಎಂಬ ಸುದ್ದಿ ತಿಳಿದ ತಕ್ಷಣ ಆಘಾತವಾಯಿತು ಎಂದು ಹೇಳಿದರು.

ಪತಿಯಿಂದ ಹಲ್ಲೆಗೊಳಗಾದ ಪತ್ನಿ ಭಗವತಿ ದೇಹಕ್ಕೆ 5 ಅಡಿ ಕಬ್ಬಿಣದ ರಾಡ್ ಸಿಲುಕಿದ್ದರಿಂದ ಅದೇ ಸ್ಥಿತಿಯಲ್ಲಿ ಆಂಬ್ಯುಲೆನ್ಸ್​​​​ನಲ್ಲಿ ಕರೆತರಲಾಯಿತು. ಮಾಹಿತಿ ತಿಳಿದ ತಕ್ಷಣ ಆಂಬ್ಯುಲೆನ್ಸ್‌ನ ಚಾಲಕ ಶುಭಂ ಮತ್ತು ಸಹಾಯಕ ಸಚಿನ್ ಸ್ಥಳಕ್ಕಾಗಮಿಸಿ ಗಂಭೀರವಾಗಿ ಗಾಯಗೊಂಡ ಭಗವತಿಯನ್ನು ಜಿಲ್ಲಾಸ್ಪತ್ರೆಗೆ ಕರೆತಂದರು.

ಜಿಲ್ಲಾಸ್ಪತ್ರೆಯಲ್ಲಿ ಗ್ರೈಂಡರ್ ನಿಂದ ರಾಡ್ ಕಟ್:ಮಹಿಳೆಯ ದೇಹಕ್ಕೆ ನುಗ್ಗಿದ ಸುಮಾರು 5 ಅಡಿ ಕಬ್ಬಿಣದ ರಾಡ್ ಅನ್ನು ಜಿಲ್ಲಾಸ್ಪತ್ರೆಯಲ್ಲಿ ಕಬ್ಬಿಣದ ಕಟಿಂಗ್ ಮೆಷಿನ್ ಗ್ರೈಂಡರ್ ನಿಂದ ಕತ್ತರಿಸಲಾಗಿದೆ. ರಾಡ್ ಚಿಕ್ಕದಾದ ನಂತರ ಮಹಿಳೆಯ ಎಕ್ಸ್-ರೇ ಮಾಡಿ ಕಬ್ಬಿಣದ ರಾಡ್​ನ ಭಾಗವನ್ನು ಬೇರ್ಪಡಿಸಿದ ನಂತರ ಪೊಲೀಸರು ಅದನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ ಯುವತಿಗೆ ಗುದ್ದಿದ ಎಸ್​ಯುವಿ: ಕಾಂಜಾವಾಲಾ ಪ್ರಕರಣ ನೆನಪಿಸಿದ ಘಟನೆ

ABOUT THE AUTHOR

...view details