ಅಹಮದಾಬಾದ್(ಗುಜರಾತ್): ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಎಟಿಎಸ್ ಜಂಟಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ದೋಣಿಯೊಂದನ್ನು ವಶಪಡಿಸಿಕೊಂಡಿವೆ. 6 ಮೈಲಿಗಳಷ್ಟು ಭಾರತೀಯ ಸಮುದ್ರದೊಳಗೆ ಬಂದಿದ್ದ ದೋಣಿಯಲ್ಲಿ 200 ಕೋಟಿ ರೂಪಾಯಿ ಮೌಲ್ಯದ 40 ಕೆಜಿ ಮಾದಕವಸ್ತುಗಳಿದ್ದವು ಎಂದು ಐಸಿಜಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.
ಗುಜರಾತ್ ಕರಾವಳಿಯಲ್ಲಿ ಪಾಕ್ ದೋಣಿ ವಶ: 200 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆ
ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಎಟಿಎಸ್ ಜಂಟಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ದೋಣಿಯೊಂದನ್ನು ವಶಪಡಿಸಿಕೊಂಡಿವೆ.
Pak boat seized off Gujarat coast
ಗುಜರಾತ್‌ನ ಜಖೌ ಕರಾವಳಿಯಿಂದ 33 ನಾಟಿಕಲ್ ಮೈಲು ದೂರದಲ್ಲಿ ಐಸಿಜಿಯ ಎರಡು ಫಾಸ್ಟ್ ಅಟ್ಯಾಕ್ ದೋಣಿಗಳು ಪಾಕಿಸ್ತಾನದ ದೋಣಿಯನ್ನು ಹಿಡಿದಿವೆ. ಹೆಚ್ಚಿನ ತನಿಖೆಗಾಗಿ ದೋಣಿಯೊಂದಿಗೆ ಪಾಕಿಸ್ತಾನಿ ಸಿಬ್ಬಂದಿಯನ್ನು ಜಖೌಗೆ ಕರೆತರಲಾಗುತ್ತಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.