ವಿರುಧುನಗರ್ (ತಮಿಳುನಾಡು):ನಿನ್ನೆ ನಡೆದ ದುರಂತದ ಬೆನ್ನಲ್ಲೇ ತಮಿಳುನಾಡಿನ ವಿರುಧುನಗರ್ನ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ.
ವಿರುಧುನಗರ್ ಜಿಲ್ಲೆಯಲ್ಲಿರುವ ಶಿವಕಾಶಿಯ ಪಟ್ಟಣದ ಕಕ್ಕಿವಾಡನ್‌ಪಾಟ್ಟಿಯಲ್ಲಿನ ಕೃಷ್ಣಸ್ವಾಮಿ ಪಟಾಕಿ ಕಾರ್ಖಾನೆಯಲ್ಲಿ ಅವಘಡ ನಡೆದಿದೆ. ಕಾರ್ಖಾನೆಯ ಕೋಣೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಅಲ್ಲಿದ್ದ ಕಾರ್ಮಿಕನೋರ್ವ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ.