ಹೈದರಾಬಾದ್: ಟೀಂ ಇಂಡಿಯಾ ಪ್ರಮುಖ ಆಟಗಾರನಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ಆರೋಪದಲ್ಲಿ ಮುಂಬೈ ಸೈಬರ್ ಪೊಲೀಸರು ಹೈದರಾಬಾದ್ ಮೂಲದ ರಾಮ್‌ನಾಗೇಶ್ ಎಂಬಾತನನ್ನು ಬಂಧಿಸಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟರ್‌ಗೆ ಬೆದರಿಕೆ: ಮುಂಬೈ ಪೊಲೀಸರಿಂದ ಹೈದರಾಬಾದ್ ವ್ಯಕ್ತಿ ಬಂಧನ
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತ ತಂಡ ಸೋತಿದ್ದಕ್ಕೆ ಟೀಂ ಇಂಡಿಯಾ ಪ್ರಮುಖ ಆಟಗಾರನಿಗೆ ಬೆದರಿಕೆ ಹಾಕಿದ್ದ ಹೈದರಾಬಾದ್ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಟೀಂ ಇಂಡಿಯಾ ಪ್ರಮುಖ ಕ್ರಿಕೆಟರ್‌ಗೆ ಬೆದರಿಕೆ; ಮುಂಬೈ ಪೊಲೀಸರಿಂದ ಹೈದರಾಬಾದ್ ವ್ಯಕ್ತಿ ಬಂಧನ
ಐಸಿಸಿ ಟಿ20 ವಿಶ್ವಕಪ್‌ನ ಸೂಪರ್12 ಹಂತದ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಕ್ರಿಕೆಟಿಗನ ವಿರುದ್ಧ ಆರೋಪಿ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈ ಸೈಬರ್ ಪೊಲೀಸರು ಇಂದು ಆರೋಪಿ ರಾಮ್‌ನಾಗೇಶ್‌ನನ್ನು ವಶಕ್ಕೆ ಪಡೆದು ಮುಂಬೈಗೆ ಕರೆದೊಯ್ದಿದ್ದಾರೆ.