ಸಂಗರೆಡ್ಡಿ (ತೆಲಂಗಾಣ):ಭೂವಿವಾದ ತಾರಕ್ಕೇರಿ ಮಾಜಿ ವಾರ್ಡ್ ಸದಸ್ಯೆಯನ್ನು ಅವರ ಮೈದುನನೇ ದಾರುಣವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಜಹೀರಾಬಾದ್ ಮಂಡಲದ ಪಾಸ್ಟಾಪುರ ನಿವಾಸಿ ಶಬಾನಾ ಬೇಗಂ, ಕೊಲೆಯಾದ ಮಹಿಳೆ. ಶಬಾನಾರ ಪತಿ ಜಹಾಂಗೀರ್ ಹಾಗೂ ಪತಿಯ ಸಹೋದರರಾದ ಯಾಕೂಬ್ ಮತ್ತು ಖಾಜಾ ನಡುವೆ ನಿನ್ನೆ ರಾತ್ರಿ ಜಮೀನಿನ ವಿಚಾರಕ್ಕೆ ಗಲಾಟೆಯಾಗಿದೆ. ಈ ವೇಳೆ ಕತ್ತಿ ಎತ್ತಿಕೊಂಡ ಖಾಜಾ, ಶಬಾನಾರ ಕುತ್ತಿಗೆ ಕತ್ತರಿಸಿದ್ದಾನೆ.