ಹಾಸನ :ಒಂದು ಕಡೆ ಕೊರೊನಾ ಸೋಂಕಿಗೆ ಜನರು ತತ್ತರಿಸಿ ಹೋಗಿರುವಾಗ, ಇಲ್ಲೊಂದು ಭಯ ಹುಟ್ಟಿಸುವ ವಾಮಚಾರ ನಡೆದಿದ್ದು, ಇದನ್ನು ಮೊದಲು ನೋಡಿದ ರೈತರಿಬ್ಬರು ಹಾಸಿಗೆ ಹಿಡಿದಿರುವ ಘಟನೆ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಅಡಗೂರು ಬಳಿಯ ಕ್ಯಾತಿನಕೆರೆಯ ಮಲ್ಲಪುರ ರಸ್ತೆಯ ಅನತಿ ದೂರದಲ್ಲಿ ಕೆಲ ದುಷ್ಕರ್ಮಿಗಳು ಇಂಥದೊಂದು ಕೃತ್ಯ ಎಸಗಿದ್ದು, ಮರದ ಕಟ್ಟಿಗೆಯಿಂದ ಮಹಿಳೆಯಾಕಾರದ ಪ್ರತಿಕೃತಿ ಮಾಡಿ, ಅದಕ್ಕೆ ಸೀರೆ, ಕೈಬಳೆ, ಮೂಗುತಿ, ಓಲೆ, ಸರ, ಜಡೆ ಮಾಡಿ, ಜಡೆಗೆ ಹೂವಿಟ್ಟು ಹೆಣ್ಣಿನ ರೂಪಕೊಟ್ಟು ನಿಲ್ಲಿಸಿದ್ದಾರೆ.
ಈ ಪ್ರತಿಕೃತಿಯ ಮುಂದೆ ಮೇಕೆಯೊಂದನ್ನು ಬಲಿಕೊಟ್ಟು, ರಕ್ತದನ್ನವನ್ನು ಇಟ್ಟು ನಿಂಬೆಹಣ್ಣನ್ನು ಕೊಯ್ದು ವಿಕೃತಿ ಮೆರೆದಿದ್ದಾರೆ. ಇದಲ್ಲದೇ, ಪ್ರತಿಕೃತಿಯ ಮುಂದೆ ಬಾಳೆಕಂದನ್ನು ಕಡಿದಿದ್ದು, ಒಂದು ಮಡಿಕೆಯಲ್ಲಿ ಅರಿಶಿನ, ಕುಂಕುಮ ಬೆರೆಸಿದ ನೀರು, ತೆಂಗಿನಕಾಯಿ, ಸ್ವಲ್ಪ ಹಣದ ಜೊತೆಗೆ ಹಳೆಯ ಚಪ್ಪಲಿ, ಶೂ ಕೂಡಾ ಇಟ್ಟಿದ್ದಾರೆ.
ಇದನ್ನೂ ಓದಿ:ತುರ್ತು ಸ್ಪಂದನಾ ಸಮಿತಿಗಳ ಜೊತೆ ಸಚಿವ ಅರವಿಂದ್ ಲಿಂಬಾವಳಿ ಸಭೆ
ಈ ಪ್ರಕರಣದ ಸಂಬಂಧ ಸ್ಥಳೀಯ ಶಾಸಕರಿಗೆ, ಪೊಲೀಸ್ ಇಲಾಖೆಗೆ, ತಹಶೀಲ್ದಾರ್ಗೆ ವಿಚಾರ ಮುಟ್ಟಿಸಿದರೂ ಯಾರೊಬ್ಬರು ಸ್ಥಳಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರಂತೆ. ಊರಿನ ಕೆಲವರುಸ್ಥಳಗೆ ಹೋಗಿ ನೋಡಿದ ಬಳಿಕ ಅನಾರೋಗ್ಯ ಪೀಡಿತರಾಗಿ ಬೆಳಗ್ಗೆಯಿಂದ ಮನೆಯಲ್ಲಿ ಮಲಗಿದ್ದಾರಂತೆ. ಇನ್ನು ಇದನ್ನು ಒಳ್ಳೆಯದಕ್ಕೆ ಮಾಡಿದ್ದಾರೋ..? ಕೆಟ್ಟದಕ್ಕೆ ಮಾಡಿದ್ದಾರೋ ಗೊತ್ತಿಲ್ಲ.
ಅಮವಾಸ್ಯೆ ಮತ್ತು ಹುಣ್ಣಿಮೆಯಲ್ಲಿ ಇಂತಹ ಕೃತ್ಯಗಳು ನಡೆಯುವುದು ಸರ್ವೆ ಸಾಮಾನ್ಯ. ಆದರೆ ಅಮವಾಸ್ಯೆ ಕಳೆದ ವಾರವಾಗಿದ್ದು, ಹುಣ್ಣಿಮೆಗೆ ಇನ್ನೂ ವಾರವಿದ್ದು, ಇದರ ಮಧ್ಯೆ ಇಂತಹ ವಾಮಾಚಾರ ಮಾಡಿರೋದನ್ನು ನೋಡಿ ಜನರು ಭಯ ಭೀತರಾಗಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಮಹಾಮಾರಿ ತೊಲಗಿ ಹೋಗಲಿ ಎಂದು ಪೂಜೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಆದರೇ ಯಾರೋ ಹೇಳಿದ ಮಾತಿಗೆ ಮತ್ತೊಬ್ಬರಿಗೆ ಕೆಡುಕು ಬಯಸಲು ಮಾಡಿದರೆ ಅದು ಅಕ್ಷ್ಯಮ್ಮ ಅಪರಾದ. ನಿಧಿ ಸಿಗಬಹುದು ಎಂಬ ಆಸೆಗೂ ಈ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರಿಂದಲೇ ಮಾಹಿತಿ ಬಹಿರಂಗವಾಗಬೇಕಿದೆ.