ಕರ್ನಾಟಕ

karnataka

ETV Bharat / crime

ಮುಳುವಾಯ್ತೇ ಅಕ್ರಮ ಮದ್ಯ ತಯಾರಿಕೆ? ಉಸಿರುಗಟ್ಟಿ ಅಪ್ಪ-ಮಕ್ಕಳು ಸಾವು - ಮನೆಯ ನೆಲಮಾಳಿಗೆಯಲ್ಲಿ ಮದ್ಯ

ಮನೆಯ ನೆಲಮಾಳಿಗೆಯಲ್ಲಿ ವಿಷಾನಿಲ ಸೋರಿಕೆಯಾಗಿ ಅಪ್ಪ-ಮಕ್ಕಳು ಸೇರಿ ನಾಲ್ವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

moradabad
ಉಸಿರುಗಟ್ಟಿ ಅಪ್ಪ-ಮಕ್ಕಳು ಸಾವು

By

Published : Jun 22, 2021, 10:32 AM IST

ಮೊರಾದಾಬಾದ್ (ಉತ್ತರ ಪ್ರದೇಶ): ಮನೆಯೊಂದರ ನೆಲಮಾಳಿಗೆಯಲ್ಲಿ ತಂದೆ ಮತ್ತು ಅವರ ಇಬ್ಬರು ಗಂಡು ಮಕ್ಕಳು ಸೇರಿ ನಾಲ್ವರ ಮೃತದೇಹ ಪತ್ತೆಯಾಗಿದ್ದು, ಇವರೆಲ್ಲರೂ ವಿಷಕಾರಿ ಅನಿಲ ಸೇವಿಸಿ ಸಾವನ್ನಪ್ಪಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಮೊರಾದಾಬಾದ್ ಜಿಲ್ಲೆಯ ರಾಜಪುರ ಕೇಸರಿಯಾ ಗ್ರಾಮದಲ್ಲಿ ವಾಸವಾಗಿದ್ದ ರಾಜೇಂದ್ರ ಈ ಹಿಂದೆ ವಿಷಪೂರಿತ ಮದ್ಯ ತಯಾರಿಸಿದ ಆರೋಪದಡಿ ಜೈಲಿಗೆ ಹೋಗಿ ಬಂದಿದ್ದರು. ಇದೀಗ ಇವರು, ಇವರ ಮಕ್ಕಳಾದ ಹರಿಕೇಶ್, ಪ್ರೀತಮ್ ಹಾಗೂ ಇನ್ನೊಬ್ಬ ವ್ಯಕ್ತಿಯ ಮನೆಯ ನೆಲಮಾಳಿಗೆಯಲ್ಲಿ ಪತ್ತೆಯಾಗಿದೆ. ನೆಲಮಾಳಿಗೆಯಲ್ಲಿ ಮದ್ಯವನ್ನು ಅಡಗಿಸಿಡುವ ವೇಳೆ ವಿಷಾನಿಲ ಸೋರಿಕೆಯಾಗಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.

ಇದನ್ನೂ ಓದಿ: ಸಾಲ ಕೇಳಲು ಮನೆಗೆ ಬರ್ತಿದ್ದ ಸ್ನೇಹಿತನ ಜೊತೆ ಪತ್ನಿಯ ಪ್ಯಾರ್‌: ಗಂಡನಿಗೆ ವಿಷಯ ಗೊತ್ತಾದಾಗ!?

ಸ್ಥಳಕ್ಕೆ ವಿಧಿವಿಜ್ಞಾನ ತಂಡದ ಜೊತೆ ಪೊಲೀಸರು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ABOUT THE AUTHOR

...view details