ಕರ್ನಾಟಕ

karnataka

ETV Bharat / crime

ಗೋಡನ್‌ಗೆ ಆಕಸ್ಮಿಕ ಬೆಂಕಿ‌; ಗುಜರಿ ವಸ್ತುಗಳು ಸುಟ್ಟು ಕರಕಲು..! - ಗೋಡನ್‌ಗೆ ಬೆಂಕಿ ಪ್ರಕರಣ

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ‌ ಕಾಣಿಸಿಕೊಂಡ ಪರಿಣಾಮ ಗೋಡನ್‌ನಲ್ಲಿ ಇದ್ದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್‌ನಲ್ಲಿ ನಡೆದಿದೆ.

Fire incident in anekal, bangalore urban district
ಗೋಡನ್‌ಗೆ ಆಕಸ್ಮಿಕ ಬೆಂಕಿ‌; ಗುಜರಿ ವಸ್ತುಗಳು ಬಹುತೇಕ ಸುಟ್ಟು ಕರಕಲು..!

By

Published : Sep 28, 2021, 3:45 AM IST

ಆನೇಕಲ್ (ಬೆಂ.ನಗರ ಜಿಲ್ಲೆ): ಬಂಡೇಪಾಳ್ಯ ಮಾರುತಿ ಟಿಂಬರ್ ರಸ್ತೆಯ ಮಮತ ಗಾರ್ಮೆಂಟ್ಸ್ ಮುಂಭಾಗದ ಗುಜರಿ ದಾಸ್ತಾನು ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ನಡೆದಿದ್ದು, ಗೋಡನ್‌ನಲ್ಲಿದ್ದ ಗುಜರಿ ವಸ್ತುಗಳು ಬಹುತೇಕ ಸುಟ್ಟು ಕರಕಲಾಗಿವೆ. ಗೋಡನ್‌ನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ‌ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.

ಸ್ಥಳಕ್ಕೆ ಬಂಡೇ ಪಾಳ್ಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 10 ಲಕ್ಷ ರೂಪಾಯಿಗಳಷ್ಟು ನಷ್ಟವಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details