ಚಿಕ್ಕಮಗಳೂರು :ಜಿಲ್ಲೆಯ ತರೀಕೆರೆ ನಗರದಲ್ಲಿ ವೈದ್ಯನ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ತರೀಕೆರೆ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ, ನಾಲ್ವರು ಆರೋಪಿಗಳ ಬಂಧನ
ಮೇ 29ರಂದು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ದೀಪಕ್ ಮೇಲೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು.ದೀಪಕ್ ಓವರ್ ಡೋಸ್ ಇಂಜೆಕ್ಷನ್ ನೀಡಿ ಬಾಲಕನ ಸಾವಿಗೆ ಕಾರಣರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕನ ಸಾವಿನ ಜಿದ್ದನ್ನ ಇಟ್ಟುಕೊಂಡು ವೈದ್ಯರ ಕೊಲೆಗೆ ಯತ್ನ ನಡೆಸಲಾಗಿತ್ತು..
ನಿನ್ನೆ ತರೀಕೆರೆ ಪಟ್ಟಣದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೈದ್ಯನ ಮೇಲೆ ಮಚ್ಚು ಮತ್ತು ಲಾಂಗುಗಳಿಂದ ದಾಳಿ ನಡೆಸಲಾಗಿತ್ತು. ಈ ಕೃತ್ಯ ಎಸಗಿದ್ದ ವೇಣು, ನಿತಿನ್, ವೆಂಕಟೇಶ್, ಚಂದ್ರಶೇಖರ್ ಎಂಬ 4 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮಗು ಸಾವಿನ್ನಪ್ಪಿದ್ದರ ಪ್ರತಿರೋಧಕ್ಕೆ ಡಾಕ್ಟರ್ ಕೊಲೆಗೆ ಸ್ಕೆಚ್ ಹಾಕಲಾಗಿತ್ತು ಎನ್ನಲಾಗಿದೆ.
ಅಜ್ಜಂಪುರ ತಾಲೂಕಿನ ತಡಗ ಗ್ರಾಮದ ಬಾಲಕ ಭುವನ್ (09) ಜ್ವರದಿಂದ ಬಳಲುತ್ತಿದ್ದರು. ಪೋಷಕರು ವೈದ್ಯ ದೀಪಕ್ ಬಳಿ ಕರೆ ತಂದಿದ್ದರು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿತ್ತು. ಮೇ 29ರಂದು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ದೀಪಕ್ ಮೇಲೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ದೀಪಕ್ ಓವರ್ ಡೋಸ್ ಇಂಜೆಕ್ಷನ್ ನೀಡಿ ಬಾಲಕನ ಸಾವಿಗೆ ಕಾರಣರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕನ ಸಾವಿನ ಜಿದ್ದನ್ನ ಇಟ್ಟುಕೊಂಡು ವೈದ್ಯರ ಕೊಲೆಗೆ ಯತ್ನ ನಡೆಸಲಾಗಿತ್ತು. ಲಾಂಗು-ಮಚ್ಚಿನಿಂದ ವೈದ್ಯನ ಕೈ-ಕಾಲು, ತಲೆಗೆ ಹಲ್ಲೆ ನಡೆಸಿದ್ದರು. ಸದ್ಯ ಸಾವಿನ ದವಡೆಯಿಂದ ವೈದ್ಯ ದೀಪಕ್ ಪಾರಾಗಿದ್ದು, ತರೀಕೆರೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.