ಕರ್ನಾಟಕ

karnataka

ETV Bharat / crime

ಕೋವಿಡ್‌ ತಂದಿಟ್ಟ ನಿರುದ್ಯೋಗ ಸಂಕಷ್ಟ: ಮಕ್ಕಳನ್ನು ಅನಾಥರಾಗಿಸಿ ಆತ್ಮಹತ್ಯೆಗೆ ಶರಣಾದ ದಂಪತಿ - couple suicide

ಕೆಲಸವಿಲ್ಲದ ಕಾರಣ ತೊಂದರೆ ಅನುಭವಿಸಿರುವ ಗಂಡ-ಹೆಂಡತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮೇದಕ್​ನಲ್ಲಿ ನಡೆದಿದೆ.

couple suicide
couple suicide

By

Published : Jul 9, 2021, 3:50 PM IST

ಮೇದಕ್(ತೆಲಂಗಾಣ): ನಿರುದ್ಯೋಗ ಸಮಸ್ಯೆಯಿಂದಾಗಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮೇದಕ್​ನಲ್ಲಿ ನಡೆದಿದೆ. ಕಿಶೋರ್​ ಹಾಗೂ ಕವಿತಾ ಸಾವನ್ನಪ್ಪಿರುವ ದಂಪತಿ. ಇವರ ಇಬ್ಬರು ಮಕ್ಕಳು ಇದೀಗ ಅನಾಥವಾಗಿವೆ.

ಕಳೆದ ಐದು ವರ್ಷಗಳ ಹಿಂದೆ ಉದ್ಯೋಗ ಹುಡುಕಿಕೊಂಡು ಹೈದರಾಬಾದ್​ಗೆ ಕಿಶೋರ್ ಹಾಗೂ ಕವಿತಾ ಆಗಮಿಸಿದ್ದರು. ಚಿಲಕಲಗುಡ್ಡದಲ್ಲಿ ಹೇರ್​ ಕಟಿಂಗ್​ ಸಲೂನ್​ ಬಾಡಿಗೆ ಪಡೆದು ಕೆಲಸ ಮಾಡುತ್ತಿದ್ದರು. ಉದ್ಯೋಗ ಚೆನ್ನಾಗಿ ನಡೆಯುತ್ತಿದ್ದ ಕಾರಣ ಕೆಲ ವರ್ಷಗಳ ಕಾಲ ಖುಷಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ಕಳೆದ ವರ್ಷ ಕೊರೊನಾ ಸೋಂಕಿನಿಂದಾಗಿ ತೊಂದರೆ ಶುರುವಾಗುತ್ತದೆ. ಲಾಕ್​ಡೌನ್​ ಘೋಷಣೆ ಮಾಡ್ತಿದ್ದಂತೆ ಕಟಿಂಗ್​ ಶಾಪ್​ ಬಂದ್ ಮಾಡಬೇಕಾಯಿತು. ಹೀಗಾಗಿ ಬೇರೆ ದಾರಿ ಕಾಣದೇ ತಮ್ಮಿಬ್ಬರು ಮಕ್ಕಳೊಂದಿಗೆ ಊರಿಗೆ ವಾಪಸ್​​ ಆಗಿದ್ದರು.

ಆತ್ಮಹತ್ಯೆಗೆ ಶರಣಾದ ದಂಪತಿ

ಕಳೆದ ನಾಲ್ಕು ದಿನಗಳ ಹಿಂದೆ ಹೈದರಾಬಾದ್​ಗೆ ವಾಪಸ್​ ಆಗಿರುವ ದಂಪತಿ, ತಮ್ಮಿಬ್ಬರು ಮಕ್ಕಳನ್ನ ಅಜ್ಜನ ಊರಿಗೆ ಮರಳಿ ಕಳುಹಿಸಿದ್ದಾರೆ. ಇದಾದ ಬಳಿಕ ತಾವಿಬ್ಬರು ವಿಷ ಸೇವನೆ ಮಾಡಿದ್ದಾರೆ. ಈ ವೇಳೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದಾರೆ. ಇದೀಗ ಇವರ ಇಬ್ಬರು ಮಕ್ಕಳು ಅನಾಥವಾಗಿವೆ.

ಇದನ್ನೂ ಓದಿರಿ: ಸ್ವೀಡನ್‌ನಲ್ಲಿ ಸ್ಕೈ ಡೈವಿಂಗ್ ವಿಮಾನ ಪತನ: 9 ಮಂದಿ ಸ್ಥಳದಲ್ಲೇ ಸಾವು

ABOUT THE AUTHOR

...view details