ಸೂರತ್:ಗುಜರಾತ್ನ ಸೂರತ್ನ ವರಾಚಾ ಪ್ರದೇಶದಲ್ಲಿ ಗೋಡೆ ಕುಸಿದು 20 ಅಡಿಯಷ್ಟು ಮಣ್ಣನಡಿಯಲ್ಲಿ ಹಲವರು ಸಿಲುಕಿದ್ದು, ಕನಿಷ್ಠ ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ದೌಡಾಯಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
ಗುಜರಾತ್ನ ಸೂರತ್ನ ವರಾಚಾ ಪ್ರದೇಶದಲ್ಲಿ ಗೋಡೆ ಕುಸಿತ ದೇಶದಲ್ಲಿಂದು ಬೆಳಗ್ಗೆಯಿಂದ ಮಧ್ಯಾಹ್ನದೊಳಗೆ ನಡೆದ ದುರಂತದಲ್ಲಿ 20ಕ್ಕೂ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿಬಸ್ - ಆಟೋ ಡಿಕ್ಕಿಯಾಗಿ 13 ಜನರು ಸಾವನ್ನಪ್ಪಿದ್ದರು. ಬಳಿಕ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಫ್ಲೈಓವರ್ನಲ್ಲಿ ನಿಂತಿದ್ದ ಬಸ್ಗೆ ಟ್ರಕ್ ಹೊಡೆದು ಆರು ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: ಎಂಪಿ, ಯುಪಿ ಬಳಿಕ ಆಂಧ್ರದಲ್ಲಿ ರಸ್ತೆ ದುರಂತ: ಐವರು ಬಲಿ
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಕೂಲಿ ಕಾರ್ಮಿಕರು ಅಸುನೀಗಿದ್ದರು. ಇದೀಗ ಗುಜರಾತ್ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.