ಬಾಗಲಕೋಟೆ:ಭರ್ಜರಿ ಕಾರ್ಯಾಚರಣೆ ನಡೆಸಿರುವ ಬಾದಾಮಿ ಪೊಲೀಸರು, ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಕನೂರು ಗ್ರಾಮದ ಬಳಿ 6 ಜನರನ್ನು ಬಂಧಿಸಲಾಗಿದೆ. ಸಂದೀಪ್ ಚೌಹಾಣ್, ಜೀರಿಪ್ ಬೋಸಲೆ, ತುಷಾರ್ ಬೋಸಲೆ, ಜಾಲಿಂದರ್ ಚೌಗಲೆ ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ಬಂಧಿತ ಆರೋಪಿಗಳು.
ಬಾದಾಮಿ ಪೊಲೀಸರ ಕಾರ್ಯಾಚರಣೆ; ಇಬ್ಬರು ಅಪ್ರಾಪ್ತರು ಸೇರಿ 6 ಮಂದಿ ಅಂತರ್ ರಾಜ್ಯ ದರೋಡೆಕೋರರ ಬಂಧನ - ಇಬ್ಬರು ಅಪ್ರಾಪ್ತರು ಸೇರಿ 6 ಮಂದಿ ಬಂಧನ
ಮಹಾರಾಷ್ಟ್ರದಿಂದ ಬಂದು ರಾಜ್ಯದಲ್ಲಿ ದರೋಡೆ, ಹಲ್ಲೆ ಸೇರಿದಂತೆ ವಿವಿಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆಪ್ರಾಪ್ತರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಬಾದಾಮಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾದಾಮಿ ಪೊಲೀಸರ ಕಾರ್ಯಾಚರಣೆ; ಇಬ್ಬರು ಅಪ್ರಾಪ್ತರು ಸೇರಿ 6 ಮಂದಿ ಅಂತರ್ ರಾಜ್ಯ ದರೋಡೆಕೋರರ ಬಂಧನ
ಬಾಲಕರಲ್ಲಿ ಒಬ್ಬನಿಗೆ 13 ವರ್ಷ ವಯಸ್ಸಾಗಿದ್ದು, ಮತ್ತೊಬ್ಬನಿಗೆ 16 ವರ್ಷ. ಬಂಧಿತರೆಲ್ಲರೂ ಮಹಾರಾಷ್ಟ್ರ ಮೂಲದವರು ಎಂದು ತಿಳಿದು ಬಂದಿದೆ. ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಕಳೆದ ವಾರದಿಂದ ದರೋಡೆ, ಹಲ್ಲೆ, ಕಳ್ಳತನ ಪ್ರಕರಣಗಳು ನಡೆದಿವೆ. ಇದರಿಂದ ಜಿಲ್ಲೆಯ ಜನತೆ ಭಯ ಭೀತಿರಾಗಿದ್ದಾರೆ. ಬಾದಾಮಿ ಸಿಪಿಐ ರಮೇಶ್ ಹಾನಾಪುರ, ಪಿಎಸ್‌ಐ ನೇತ್ರಾವತಿ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ.ಯ ನೇತೃತ್ವ ವಹಿಸಿದ್ದಾರೆ. ತನಿಖೆ ನಡೆಸಿದ ಬಳಿಕ ದರೋಡೆಕೋರರು ಎಲ್ಲೆಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ ಎಂಬ ಮಾಹಿತಿ ಬಹಿರಂಗ ವಾಗಲಿದೆ.