ಬೆಂಗಳೂರು: ಚೆನ್ನೈ ವಲಯ ಎನ್‌ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ದೆಹಲಿಗೆ ತಲುಪಿಸಲು ಉದ್ದೇಶಿಸಲಾಗಿದ್ದ 2.91ಕೆ.ಜಿ ಹೆರಾಯಿನ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೋಹಾನ್ಸ್‌ಬರ್ಗ್‌ನಿಂದ ಕೊಚ್ಚಿಗೆ ಬಂದಿಳಿದ ಶೆರಾನ್ ಚಿಗ್ವಾ (30) ಎಂಬ ಮಹಿಳೆ ಬಂಧಿತ ಆರೋಪಿ
ಅಕ್ರಮವಾಗಿ ಹೆರಾಯಿನ್ ಸಾಗಿಸುವಾಗ ಸಿಕ್ಕಿಬಿದ್ದ ಮಹಿಳೆ : 2.91 ಕೆಜಿ ಮಾದಕ ವಸ್ತು ವಶ - ಬೆಂಗಳೂರು ಕ್ರೈಮ್ ನ್ಯೂಸ್
ದೆಹಲಿಗೆ ತಲುಪಿಸುವ ಉದ್ದೇಶದಿಂದ ಅಕ್ರಮವಾಗಿ 2.91 ಕೆಜಿ ಹೆರಾಯಿನ್ ಸಾಗಿಸಲು ಯತ್ನಿಸಿದ್ದ ಮಹಿಳೆಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಈಕೆ ನೈಜೀರಿಯನ್ ಮೂಲದ ವ್ಯಕ್ತಿಯಿಂದ ಹೆರಾಯಿನ್ ಪಡೆದಿದ್ದು, ಟ್ರಾಲಿ ಬ್ಯಾಗ್‌ನಲ್ಲಿ ಅಡಗಿಸಿಟ್ಟು ಹೆರಾಯಿನ್ ಸಾಗಿಸಿರುವ ಆರೋಪ ಇದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಮಾರ್ಗವಾಗಿ ದೆಹಲಿಗೆ ಪ್ರಯಾಣಿಸುವ ಮುನ್ನವೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತಳಿಂದ 2.91 ಕೆ.ಜಿ ಹೆರಾಯಿನ್ ಜಪ್ತಿ ಮಾಡಿ, ಈಕೆಯನ್ನ ಪೊಲೀಸರ ವಶಕ್ಕೆ ನೀಡಿದ್ದು, ವಿಚಾರಣೆ ನಡೆಸಿದ್ದಾರೆ.
ರಾಜ್ಯಾದ್ಯಂತ ಅನ್‌ಲಾಕ್ ಪ್ರಕ್ರಿಯೆ ಆರಂಭ ಆಗುತ್ತಿದ್ದಂತೆ ಅಪರಾಧಿಗಳು ತಮ್ಮ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ನಿರ್ಬಂಧಗಳು ಸಡಿಲಿಕೆಯಾಗುತ್ತಿದ್ದಂತೆ ಮಾದಕ ವಸ್ತುಗಳು, ಡ್ರಗ್ಸ್‌ಗಳ ಅಕ್ರಮ ಸಾಗಾಣಿಕೆ ಕೂಡ ಆರಂಭಿಸಿದ್ದಾರೆ. ಪೊಲೀಸರು ಕೂಡ ಸಾಗಾಣಿಕೆ ಆಗುತ್ತಿರುವ ಡ್ರಗ್ಸ್, ಮಾದಕ ವಸ್ತುಗಳ ತನಿಖೆ ನಡೆಸಿ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನ ಬಂಧಿಸಿ ಅವರಿಂದ ವಸ್ತುಗಳನ್ನ ವಶಕ್ಕೆ ಪಡೆಯುತ್ತಿದ್ದಾರೆ.