ಚಿತ್ತೂರು (ಆಂಧ್ರ ಪ್ರದೇಶ): ಪಕ್ಕದ ಮನೆಯ ಯುವತಿ ಮೊಬೈಲ್ ನಂಬರ್ ಕೊಡದಿದ್ದಕ್ಕೆ ಗನ್‌ನಿಂದ ಗುಂಡು ಹಾರಿಸಿ ಬೆದರಿಕೆ ಹಾಕಿರುವ ಘಟನೆ ಬೈರೆಡ್ಡಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡಪನತ್ತಂ ಗ್ರಾಮದಲ್ಲಿ ನಡೆದಿದೆ.
ಚಾನು ಎಂಬುವವನೇ ಗುಂಡು ಹಾರಿಸಿ ಬೆದರಿಕೆ ಹಾಕಿರುವ ಯುವಕ. ಪಕ್ಕದ ಮನೆಯ ಯುವತಿಯ ಫೋನ್ ನಂಬರ್ ಕೇಳಿದ್ದಾನೆ. ಆಕೆ ನಂಬರ್ ನೀಡಲು ನಿರಾಕರಿಸಿದ್ದಾಳೆ. ಜೊತೆಗೆ ತಕ್ಷಣವೇ ವಿಷಯವನ್ನು ತನ್ನ ತಾಯಿಗೆ ಮುಟ್ಟಿಸಿದ್ದಾಳೆ. ಯುವತಿ ತಾಯಿ ಚಾನು ಮನೆಗೆ ಹೋಗಿ ಪೋಷಕರಿಗೆ ನಿಮ್ಮ ಮಗನ ವರ್ತನೆ ಸರಿಯಿಲ್ಲ ಎಂದು ಎಚ್ಚರಿಕೆ ನೀಡಿ ಬಂದಿದ್ದಾಳೆ. ಆರೋಪಿಯ ಕೃತ್ಯದ ಬಗ್ಗೆ ಗ್ರಾಮದ ಹಿರಿಯರ ಗಮನಕ್ಕೂ ತಂದಿದ್ದಾಳೆ.