ಕರ್ನಾಟಕ

karnataka

ETV Bharat / crime

ಶಿವಮೊಗ್ಗದಲ್ಲಿ ಸಿಡಿಲು ಬಡಿದು ರೈತ ಸಾವು - ಶಿವಮೊಗ್ಗದಲ್ಲಿ ಸಿಡಿಲಿಗೆ ರೈತ ಸಾವು

ರೈತನೊಬ್ಬ ತನ್ನ ತೋಟದಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕು ಹುಂಚ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಂಡ್ಲಗದ್ದೆ ಸಮೀಪದ ಆದಿಗದ್ದೆಯಲ್ಲಿ ನಡೆದಿದೆ.

lightning strike
lightning strike

By

Published : May 14, 2021, 4:16 AM IST

ಶಿವಮೊಗ್ಗ:ಸಿಡಿಲು ಬಡಿದು ರೈತನೋರ್ವ ಮೃತಪಟ್ಟ ಘಟನೆ ಹುಂಚ ಸಮೀಪದ ಆದಿಗದ್ದೆ ಗ್ರಾಮದಲ್ಲಿ ನಡೆದಿದೆ.

ಹೊಸನಗರ ತಾಲೂಕು ಆದಿಗದ್ದೆಯ ಉಮೇಶ್(47) ಮೃತ ರೈತ. ಉಮೇಶ್ ತನ್ನ ಹೆಂಡತಿ, ಮಗ ಹಾಗೂ ಕೂಲಿಕಾರರ ಜೊತೆ ಅಡಿಕೆ ತೋಟದ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವಾಗ ಸಿಡಿಲು ಬಡಿದಿದೆ. ಸಿಡಿಲನ ಬಡಿತಕ್ಕೆ ಉಮೇಶ್ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಮೇಶ್ ಜತೆ ಬರುತ್ತಿದ್ದವರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details