ತುಮಕೂರು:ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಿಧಿ ತೆಗೆಯಲು ಗುಂಡಿ ತೋಡುತ್ತಿದ್ದ ಐವರನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಕಳೆದ ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿ ಈ ವಿಷಯ ಗ್ರಾಮದಲ್ಲಿ ಹರಡಿದೆ. ತಕ್ಷಣ ಇಡೀ ಗ್ರಾಮಸ್ಥರು ದೇಗುಲದ ಬಳಿ ಜಮಾಯಿಸಿದ್ದಾರೆ. ಗ್ರಾಮಸ್ಥರು ದೇವಸ್ಥಾನಕ್ಕೆ ಆಗಮಿಸಿದಾಗ ಹೊರಗಡೆ ನಿಂತಿದ್ದ ಇನ್ನಿಬ್ಬರು ಕಳ್ಳರು ತಪ್ಪಿಸಿಕೊಂಡಿದ್ದಾರೆ. ಐವರು ಆರೋಪಿಗಳನ್ನು ದೇವಸ್ಥಾನದ ಬಾಗಿಲು ಹಾಕಿ ಗ್ರಾಮಸ್ಥರು ಬಂಧಿಸಿಟ್ಟಿದ್ದಾರೆ.
ದೇಗುಲದಲ್ಲಿ ನಿಧಿಗಾಗಿ ಗುಂಡಿ ತೋಡುತ್ತಿದ್ದ ಚೋರರಿಗೆ ಗ್ರಾಮಸ್ಥರಿಂದ ಥಳಿತ - ಆಂಜನೇಯ ಸ್ವಾಮಿ ದೇವಸ್ಥಾನ
ಸೊಲ್ಲಾಪುರ ಆಂಜನೇಯ ದೇವಸ್ಥಾನದಲ್ಲಿ ನಿಧಿಗಾಗಿ ಗುಂಡಿ ತೋಡುತ್ತಿದ್ದ 7 ಮಂದಿ ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ದೇಗುಲದಲ್ಲಿ ನಿಧಿ ತೆಗೆಯುತ್ತಿದ್ದ ಐವರು ಚೋರರ ಹಿಡಿದು ಥಳಿಸಿದ ಗ್ರಾಮಸ್ಥರು
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರು ಕೂಡಿಟ್ಟಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಕೋಲಾರ: ಲಾರಿ ದರೋಡೆ ಮಾಡಿ ಹಣ ದೋಚಿದ್ದ ಐವರು ಆರೋಪಿಗಳ ಬಂಧನ