ತುಮಕೂರು: ಪತ್ನಿ ತಾನು ಮೋಜು ಮಸ್ತಿಗಾಗಿ ಮನೆ ತೊರೆದು ದುಬೈಗೆ ಹೋಗಿದ್ದರಿಂದ ಬೇಸತ್ತ ಪತಿ ತನ್ನ ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಪಿಹೆಚ್ ಕಾಲೋನಿಯಲ್ಲಿ ನಡೆದಿದೆ. ಸಮೀವುಲ್ಲಾ ಆತ್ಮಹತ್ಯೆಗೆ ಶರಣಾದವರು. ಘಟನೆಯಲ್ಲಿ ಮೂವರು ಮಕ್ಕಳು ಜೀವನ್ಮರಣದ ಹೋರಾಟ ನಡೆಸುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಸಮೀವುಲ್ಲಾನ ಪತ್ನಿ ಸಾಯಿರಾಬಾನು ಪ್ರಸ್ತುತ ದುಬೈನಲ್ಲಿ ಮನೆ ಕೆಲಸ ಮಾಡುತ್ತಿದ್ದಾರೆ. 15 ವರ್ಷಗಳ ಹಿಂದೆ ಇಬ್ಬರಿಗೂ ಮದುವೆಯಾಗಿ ಮೂರು ಮಕ್ಕಳಿದ್ದರು. ಮನೆಯಲ್ಲಿ ಆರ್ಥಿಕ ಸಂಕಷ್ಟದಿಂದ ಬೇಸತ್ತ ಅವರು ಉದ್ಯೋಗ ಹುಡುಕಿಕೊಂಡು ದುಬೈ(ಸೌದಿ)ಗೆ ಹೋಗಿದ್ದರಂತೆ. ಆದರೆ ಅಲ್ಲಿ ಮೋಜು ಮಸ್ತಿಯ ಜೀವನಕ್ಕೆ ಮಾರು ಹೋಗಿದ್ದ ಅವರು ವಾಪಸ್ ತುಮಕೂರಿಗೆ ಬರಲು ಒಪ್ಪಲಿಲ್ಲ. ಇದರಿಂದ ಸಮೀವುಲ್ಲಾ ಬೇಸತ್ತು ಹೋಗಿದ್ದನಂತೆ.