ತುಮಕೂರು: ಕೊರೊನಾ ವೈರಸ್ ಶಂಕಿತ ವ್ಯಕ್ತಿ ಮನೆಯೊಂದರಲ್ಲಿ ಕ್ವಾರಂಟೈನ್ ಇರುವ ಬಗ್ಗೆ ಜಿಲ್ಲಾಡಳಿತ ಅಂಟಿಸಿದ್ದ ಪೋಸ್ಟರನ್ನು ಮರೆಮಾಚಿದ್ದ ವಿಷಯ ಬೆಳಕಿಗೆ ಬಂದಿದೆ. ಪೋಸ್ಟರ್ ಕಾಣದಂತೆ ಮರೆಮಾಚಿದ್ದ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಬಹಿರಂಗಪಡಿಸಿದ ಘಟನೆ ತುಮಕೂರು ನಗರದ ಎಸ್ಐಟಿ ಬಡಾವಣೆಯಲ್ಲಿ ನಡೆದಿದೆ.
ಕ್ವಾರಂಟೈನ್ ಪೋಸ್ಟರ್ ಮರೆಮಾಚಿದರೂ ಪೊಲೀಸರು ಬಿಡಲಿಲ್ಲ
ಕ್ವಾರಂಟೈನ್ನಲ್ಲಿ ವ್ಯಕ್ತಿಗಳು ಇರುವ ಬಗ್ಗೆ ಜಿಲ್ಲಾಡಳಿತ ಪೋಸ್ಟರ್ ಅಂಟಿಸಿದ್ದರೂ ಅದನ್ನೇ ಮರೆಮಾಚಿದ ಘಟನೆ ತುಮಕೂರಿನಲ್ಲಿ ನಡೆದಿದೆ. ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಆಗಮಿಸಿದ ಪೊಲೀಸರು ಕ್ವಾರಂಟೈನ್ ಪೋಸ್ಟರ್ ಎಲ್ಲರಿಗೂ ಕಾಣುವಂತೆ ಮಾಡಿದ್ದಾರೆ.
ಎಸ್ಐಟಿ ಬಡಾವಣೆಯ ಮೂರನೇ ಕ್ರಾಸಿನಲ್ಲಿ ಅರುಣ ಸ್ಟೋರ್ಸ್ ಅಂಗಡಿಗೆ ಹೊಂದಿಕೊಂಡಿರುವ ಮನೆಯಲ್ಲಿ ಇಬ್ಬರು ಕ್ವಾರಂಟೈನ್ನಲ್ಲಿದ್ದಾರೆ. ಈ ಮನೆಯನ್ನು ಯಾರೂ ಪ್ರವೇಶಿಸಬಾರದು. ಮನೆ ಜಿಲ್ಲಾಡಳಿತದ ನಿಗಾದಲ್ಲಿ ಇದೆ ಎಂದು ಮನೆಯ ಮುಂದೆ ಪೋಸ್ಟರ್ ಅಂಟಿಸಲಾಗಿತ್ತು. ಮಾ. 14ರಿಂದ ಏ. 12ರವರೆಗೆ ಯಾರೂ ಮನೆ ಪ್ರವೇಶಿಸಬಾರದು ಎಂದು ಪೋಸ್ಟರ್ನಲ್ಲಿ ಬರೆಯಲಾಗಿತ್ತು.
ಆದರೆ ಈ ಪೋಸ್ಟರ್ ಯಾರಿಗೂ ಕಾಣದಂತೆ ಪ್ಲಾಸ್ಟಿಕ್ ಚೀಲದಿಂದ ಮರೆ ಮಾಡಲಾಗಿತ್ತು. ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪ್ಲಾಸ್ಟಿಕ್ ಚೀಲವನ್ನು ತೆರವುಗೊಳಿಸಿದ್ದಾರೆ.