ತುಮಕೂರು : ಯಾರು ಏನ್ ಬೇಕಾದ್ರು ಹೇಳಿಕೊಳ್ಳಲಿ ಕಾಂಗ್ರೆಸ್ಗೆ ಏನೂ ಮಾಡೋಕಾಗಲ್ಲ, ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ಕುಟುಂಬ ಕಾರ್ಯಕ್ರಮದ ಆಮಂತ್ರಣ ನೀಡಲಿಕ್ಕೆ ಬಂದಿದ್ದೇನೆ ಎಂದು ತಿಳಿಸಿದರು. ಅಲ್ಲದೆ, ಜನವರಿ 20 ರಂದು ರೈತರ ಪರವಾಗಿ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.
ಫ್ರೀಡಂ ಪಾರ್ಕ್‌ನ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ. ಇಡೀ ರಾಷ್ಟ್ರದಲ್ಲಿ ಇಂಥ ದೊಡ್ಡ ಹೋರಾಟ ನಡೆದಿರಲಿಲ್ಲ. ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ, ಕಮಿಟಿ ಮಾಡಿರೋದನ್ನ ರೈತರು ಧಿಕ್ಕರಿಸಿದ್ದಾರೆ. ನಮಗೆ ಅವಶ್ಯಕತೆ ಇಲ್ಲ ಎಂದು ಹೋರಾಟ ಮುಂದುವರೆಸಿದ್ದಾರೆ. ಇದು ರೈತ ಸಮುದಾಯಕ್ಕೆ, ದೇಶಕ್ಕೆ ಮರಣ ಶಾಸನವಾಗಿದೆ ಎಂದರು.