ತುಮಕೂರು :ಇತ್ತೀಚಿಗೆ ಗುಬ್ಬಿ ಪಟ್ಟಣದಲ್ಲಿ ಹಾಡಹಗಲೇ ಕೊಲೆಗೀಡಾಗಿದ್ದ ನರಸಿಂಹಮೂರ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣವನ್ನು ಭೇದಿಸಿರುವ ತುಮಕೂರು ಜಿಲ್ಲಾ ಪೊಲೀಸರು, ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಜಮೀನು ವಿವಾದವೇ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಹೇಳಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 13 ಮಂದಿ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.
ಕೊಲೆ ನಡೆದ ಸಂದರ್ಭದಲ್ಲಿ ಏಳು ಮಂದಿ ಸ್ಥಳದಲ್ಲಿದ್ದರೂ, ಇನ್ನುಳಿದ ಆರು ಮಂದಿಗೆ ಸಹಕಾರ ನೀಡಿದ್ದಾರೆ. ಗುಬ್ಬಿ ತಾಲೂಕಿನ ಜೆ ಹೊಸಳ್ಳಿಯ ಕಿರಣ್ ಪ್ರಮುಖ ಆರೋಪಿಯಾಗಿದ್ದಾನೆ. ಮಂಡ್ಯ ತಾಲೂಕು ಹೊಳಲು ಗ್ರಾಮದ ರಾಜ, ಕೃಷ್ಣ ನಗರದ ಮಂಜು, ರಾಮನಗರ ಜಿಲ್ಲೆ ಬಿಡದಿ ಅಭಿಷೇಕ್, ಹೊಸೂರು ಗ್ರಾಮದ ಹೆಚ್.ಎಸ್. ಚಂದ್ರಶೇಖರ್, ಮೈಸೂರು ನಗರದ ಚಾಮುಂಡಿಬೆಟ್ಟ ರಸ್ತೆಯ ವೆಂಕಟೇಶ್ ಮಂಡಿ, ಮಹಲ ಕೀರ್ತಿ, ಗುಬ್ಬಿ ನಗರದ ಕರೆಕಲ್ಲು ನಿವಾಸಿಯಾದ ನಯಾಜ್, ವಿದ್ಯಾನಗರದ ಭರತ್, ಧೀರಜ್, ನಾಗರಾಜು, ಬಸವರಾಜು, ಬೆಂಗಳೂರಿನ ಪೀಣ್ಯ ಎರಡನೇ ಹಂತದ ನಿವಾಸಿ ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದಾರೆ.