ಕರ್ನಾಟಕ

karnataka

ETV Bharat / city

ಒಕ್ಕಲಿಗರ ಸಂಘದ ಚುನಾವಣೆ ಪ್ರಚಾರದ ವೈಖರಿ ಬೇಸರ ತರಿಸಿದೆ: ಶ್ರಿ ನಂಜಾವಧೂತ ಸ್ವಾಮೀಜಿ

ಸಮುದಾಯದ ಬಗ್ಗೆ ಬದ್ಧತೆವುಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಿದೆ. ಮತದಾರರು ಹಣ ಪಡೆದ್ರೆ ಗೆಲುವು ಸಾಧಿಸುವ ನಿರ್ದೇಶಕ ಹೆಚ್ಚು ಹಣವನ್ನು ಸಂಘದಿಂದ ಅಪೇಕ್ಷಿಸುತ್ತಾನೆ. ಹೀಗಾಗಿ ಜಾಗ್ರತೆಯಿಂದ ಮತದಾರರು ಸಮರ್ಥ ವ್ಯಕ್ತಿಗೆ ಮತ ಚಲಾಯಿಸುವಂತೆ ಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಮನವಿ ಮಾಡಿದ್ದಾರೆ.

nanjavadutha-swamiji-reaction-on-vokkaligara-sangha-election
ಶ್ರಿ ನಂಜಾವಧೂತ ಸ್ವಾಮೀಜಿ

By

Published : Dec 11, 2021, 4:10 PM IST

ತುಮಕೂರು : ಒಕ್ಕಲಿಗರ ಸಂಘದ ಚುನಾವಣೆಯ ಪ್ರಚಾರದ ವೈಖರಿ ಬೇಸರ ತರಿಸಿದೆ. ಚುನಾವಣಾ ವ್ಯವಸ್ಥೆ ಮಾದರಿಯಾಗಿರಬೇಕು. ಈ ಹಿಂದೆ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಅದು ಒಂದು ಕಪ್ಪು ಚುಕ್ಕೆಯಾಗಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಒಕ್ಕಲಿಗರ ಸಂಘದ ಚುನಾವಣೆ ಕುರಿತು ಶ್ರಿ ನಂಜಾವಧೂತ ಸ್ವಾಮೀಜಿ ಹೇಳಿಕೆ

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಾವ್ಯಾರು ಸಮುದಾಯದ ಮಾಲೀಕರಲ್ಲ. ಸಮುದಾಯದ ಕಟ್ಟಕಡೆಯ ವ್ಯಕ್ತಿಯು ಮಾಲೀಕನಾಗಿರುತ್ತಾನೆ. ನಮ್ಮ ಬದುಕಿನ ಭವಿಷ್ಯವನ್ನು ಸುಸ್ತಿರವಾಗಿಡಬೇಕಾದವರು ಒಕ್ಕಲಿಗ ಸಂಘದ ನಿರ್ದೇಶಕರಾಗಿರುತ್ತಾರೆ. ಇಂತಹವರು ಹೇಗೆ ಇರಬೇಕು ಎಂದು ಆಲೋಚಿಸಬೇಕಿದೆ. ಅವರು ಭ್ರಷ್ಟರಾದರೆ ಸಂಘವನ್ನು ಭ್ರಷ್ಟತೆಯ ಕೂಪಕ್ಕೆ ತಳ್ಳುತ್ತಾರೆ ಎಂದಿದ್ದಾರೆ.

ಒಕ್ಕಲಿಗರ ಸಂಘ ದೇಶಕ್ಕೆ ಮಾದರಿಯಾಗಿರಬೇಕಿದೆ. ಸದಸ್ಯರು ಚಲಾಯಿಸುವ ಮತ ಸಮುದಾಯವನ್ನು ಹೊಸದಿಕ್ಕಿನ ಕಡೆಗೆ ತೆಗೆದುಕೊಂಡು ಹೋಗುವಂತಹದ್ದು, ಸಮುದಾಯದ ಬಗ್ಗೆ ಬದ್ಧತೆಯುವಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಿದೆ. ಮತದಾರರು ಹಣ ಪಡೆದರೆ ಗೆಲುವು ಸಾಧಿಸುವ ನಿರ್ದೇಶಕ ಹೆಚ್ಚು ಹಣವನ್ನು ಸಂಘದಿಂದ ಅಪೇಕ್ಷಿಸುತ್ತಾನೆ. ಹೀಗಾಗಿ ಜಾಗೃತೆಯಿಂದ ಮತದಾರರು ಸಮರ್ಥ ವ್ಯಕ್ತಿಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details