ಕರ್ನಾಟಕ

karnataka

ETV Bharat / city

Watch... ಸಿದ್ಧಗಂಗಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮಗುವಿಗೆ 'ಶಿವಮಣಿ' ಹೆಸರು - ಮುಸ್ಲಿಂ ಮಗುವಿಗೆ ಶಿವಮಣಿ ಹೆಸರು

ತುಮಕೂರಿನ ಸಿದ್ಧಗಂಗಾ ಕ್ಷೇತ್ರದಲ್ಲಿ ಇಂದು ಆಯೋಜಿಸಲಾಗಿದ್ದ ಶಿವಕುಮಾರ ಶ್ರೀಗಳ ಹೆಸರು ನಾಮಕರಣ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಮಗುವಿಗೆ 'ಶಿವಮಣಿ' ಎಂದು ನಾಮಕರಣ ಮಾಡಲಾಗಿದೆ.

ಶಿವಮಣಿ

By

Published : Apr 1, 2022, 3:33 PM IST

Updated : Apr 1, 2022, 4:36 PM IST

ತುಮಕೂರು:ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ 115 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮಗುವಿಗೆ 'ಶಿವಮಣಿ' ಎಂದು ಹೆಸರಿಡಲಾಗಿದೆ.

ಸಿದ್ಧಗಂಗಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮಗುವಿಗೆ 'ಶಿವಮಣಿ' ಹೆಸರು

ತುಮಕೂರು ನಗರದ ಕ್ಯಾತ್ಸಂದ್ರದ ನಿವಾಸಿ ಶಾಹಿಸ್ತಾ ಮತ್ತು ಜಮೀರ್ ದಂಪತಿ ತಮ್ಮ ಮಗಳಿಗೆ ಶಿವಮಣಿ ಎಂದು ನಾಮಕರಣ ಮಾಡಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರ ವಿಚಾರಧಾರೆ ನಮಗೆಲ್ಲ ಮಾದರಿಯಾಗಿದೆ. ಅವರು ಸಮಾನತೆಯ ಸಂದೇಶ ಸಾರಿದ್ದರು. ಅವರ ಆದರ್ಶಗಳಲ್ಲೇ ನಾವು ಸಾಗುತ್ತೇವೆ ಎಂದು ತಿಳಿಸಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್​ನಿಂದ ಮಕ್ಕಳಿಗೆ ನಾಮಕರಣ ಕಾರ್ಯಕ್ರಮ ಮಾಡಲಾಯಿತು. ರಾಮನಗರ, ಬೀದರ್, ರಾಯಚೂರು ರಾಜ್ಯದ ನಾನಾ ಭಾಗಗಳಿಂದ ಬಂದ ಮಕ್ಕಳಿಗೆ ನಾಮಕರಣ ಮಾಡುವ ಜತೆಗೆ ಮಕ್ಕಳಿಗೆ ಉಚಿತವಾಗಿ ತೊಟ್ಟಿಲು, ಇನ್ನಿತರ ಸಾಮಗ್ರಿಗಳನ್ನು ಕೊಡಲಾಯಿತು.

ಓದಿ:ರಾಜ್ಯ ಸರ್ಕಾರದ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಘೋಷಣೆ

Last Updated : Apr 1, 2022, 4:36 PM IST

ABOUT THE AUTHOR

...view details