ಕರ್ನಾಟಕ

karnataka

ETV Bharat / city

ಫೈನಾನ್ಸ್ ಕಂಪನಿ ಬಲವಂತದ ಸಾಲ ವಸೂಲಿಗೆ ಮುಂದಾಗದಂತೆ ಆದೇಶಿಸಲು ಮನವಿ - ತುಮಕೂರು ಲೇಟೆಸ್ಟ್​ ನ್ಯೂಸ್

ಹುಳಿಯಾರು ಪಟ್ಟಣದ ವಿವಿಧ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ 2021ರ ಮೇ 31ರ ವರೆಗೆ ಮಾನವೀಯತೆ ದೃಷ್ಟಿಯಿಂದ ಯಾವುದೇ ಬಲವಂತದ ಸಾಲ ವಸೂಲಿಗೆ ಮುಂದಾಗದಂತೆ ಸರ್ಕಾರ ಸೂಚನೆ ನೀಡಬೇಕೆಂದು ಹುಳಿಯಾರು ಮಹಿಳಾ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

Tumkur
ಫೈನಾನ್ಸ್ ಕಂಪನಿಯವರು ಬಲವಂತದ ಸಾಲ ವಸೂಲಿಗೆ ಮುಂದಾಗದಂತೆ ಆದೇಶಿಸಲು ಮನವಿ

By

Published : May 4, 2021, 8:23 AM IST

ತುಮಕೂರು: ಫೈನಾನ್ಸ್ ಕಂಪನಿಯವರು ಬಲವಂತದ ಸಾಲ ವಸೂಲಾತಿಗೆ ಮುಂದಾಗದಂತೆ ಆದೇಶಿಸಲು ಸರ್ಕಾರಕ್ಕೆ ಹುಳಿಯಾರು ಮಹಿಳಾ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.

ಫೈನಾನ್ಸ್ ಕಂಪನಿಯವರು ಬಲವಂತದ ಸಾಲ ವಸೂಲಿಗೆ ಮುಂದಾಗದಂತೆ ಆದೇಶಿಸಲು ಮನವಿ

ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ರಾಜ್ಯಸರ್ಕಾರ ಜನತಾ ಕರ್ಫ್ಯೂ ಘೋಷಿಸಿದೆ. ಪರಿಣಾಮ, ಜನಸಾಮಾನ್ಯರ ಆದಾಯದ ಮೇಲೆ ಹೊಡೆತ ಬಿದ್ದಿದೆ. ಹುಳಿಯಾರು ಪಟ್ಟಣದಲ್ಲಿ ಹಲವು ಫೈನಾನ್ಸ್ ಕಂಪನಿಯವರು ಮಹಿಳಾ ಸಂಘದ ಸದಸ್ಯರ ಬಳಿ ಬಲವಂತದ ಸಾಲ ವಸೂಲಾತಿ ಕ್ರಮಕ್ಕೆ ಮುಂದಾಗಿದ್ದಾರೆ. ಸಮಯಾವಕಾಶ ಕೊಡುವಂತೆ ಎಂದು ಸಂಘದ ಸದಸ್ಯರು ಮನವಿ ಮಾಡುತ್ತಿದ್ದರೂ ಸಹ ಪುರಸ್ಕರಿಸುತ್ತಿಲ್ಲ ಎಂದು ಹೇಳಿದರು.

ಕಳೆದ ವರ್ಷ ಸಹ ಇದೇ ರೀತಿ ಸಮಸ್ಯೆ ಎದುರಾದಾಗ ಸರ್ಕಾರ ಬಲವಂತದ ವಸೂಲಾತಿ ಮಾಡದಿರಲು ಆದೇಶ ನೀಡಿತ್ತು. ನಂತರದ ದಿನದಲ್ಲಿ ಬಡ್ಡಿ ಸಮೇತ ಸಾಲ ಮರುಪಾವತಿ ಮಾಡಿದ್ದೆವು.

ಹುಳಿಯಾರು ಪಟ್ಟಣದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಾದ ಗ್ರಾಮೀಣ ಕೂಟ, ಎಸ್​ಕೆಎಸ್ ಸಂಘ, ಐಐಬಿಎಫ್, ಎಲ್​​ಎನ್​ಟಿ, ಸಿಡಿ ಪಿನ್, ಮುತ್ತೂಟ್ ಫೈನಾನ್ಸ್, ಸಂಘಮಿತ್ರ ಸೇರಿದಂತೆ ವಿವಿಧ ಕಂಪನಿಗಳಿಗೆ 2021ರ ಮೇ 31ರ ವರೆಗೆ ಮಾನವೀಯತೆ ದೃಷ್ಟಿಯಿಂದ ಯಾವುದೇ ಬಲವಂತದ ಸಾಲ ವಸೂಲಿಗೆ ಮುಂದಾಗದಂತೆ ಸರ್ಕಾರ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:'ರಿಸೈನ್ ಸುಧಾಕರ್' ಕಾಂಗ್ರೆಸ್ ಅಭಿಯಾನ: 11 ಲಕ್ಷ ಮಂದಿ ಬೆಂಬಲ

ABOUT THE AUTHOR

...view details