ಕರ್ನಾಟಕ

karnataka

ETV Bharat / city

ಕುರಿಗಾಹಿಗೆ ಕೊರೊನಾ: ಕುರಿಗಳ ಕೋವಿಡ್​ ಟೆಸ್ಟ್​​ಗೆ​​​​ ಮಾದರಿ ಸಂಗ್ರಹಿಸಿದ ಅಧಿಕಾರಿಗಳು!

ಕೆಲ ದಿನಗಳ ಹಿಂದೆ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ಕುರಿಗಾಹಿಗೆ ಕೊರೊನಾ ಸೋಂಕು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಕುರಿಗಳನ್ನು ಕ್ವಾರಂಟೈನ್​ ಮಾಡಲಾಗಿತ್ತು. ಇಂದು ಈ ಕುರಿಗಳ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

health officers collected throat swab sample of sheep
ಕುರಿಗಾಹಿಗೆ ಕೊರೊನಾ

By

Published : Jun 30, 2020, 5:39 PM IST

ತುಮಕೂರು: ಕುರಿಗಾಹಿಗೆ ಕೊರೊನಾ ಸೋಂಕು ತಗುಲಿದ್ದು, ಆತ ಮೇಯಿಸುತ್ತಿದ್ದ ಕುರಿಗಳಿಗೂ ಸೋಂಕು ತಗುಲಿರುವ ಅನುಮಾನದ ಹಿನ್ನೆಲೆಯಲ್ಲಿ ಕುರಿಗಳ ಗಂಟಲು ದ್ರವದ ಮಾದರಿಯನ್ನು ತೆಗೆಯಲಾಯಿತು.

ಕ್ವಾರಂಟೈನ್ ಮಾಡಲಾಗಿರುವ ಕುರಿಗಳು

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಕುರಿಗಾಹಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆ ಈಗಾಗಲೇ 47 ಕುರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಪಶುಪಾಲನಾ ಇಲಾಖೆ ಅಧಿಕಾರಿಗಳು ಮತ್ತು ವೈದ್ಯರ ತಂಡ ಕುರಿಗಳ ಗಂಟಲು ದ್ರವದ ಮಾದರಿಯನ್ನು ಇಂದು ಸಂಗ್ರಹಿಸಿದರು. ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿರುವಂತೆ ಭೋಪಾಲ್​ನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಮಾದರಿಯನ್ನು ಕಳುಹಿಸಿಕೊಡಲಾಗುತ್ತಿದೆ.

ಕುರಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಿದ ಅಧಿಕಾರಿಗಳು

ಸದ್ಯ ಎಲ್ಲಾ ಕುರಿಗಳನ್ನು ಜಕ್ಕೇನಳ್ಳಿಯಲ್ಲಿ ಒಂದೆಡೆ ಕ್ವಾರಂಟೈನ್ ಮಾಡಲಾಗಿದೆ. ಈ ನಡುವೆ ಸ್ಥಳಕ್ಕೆ ತೆರಳಿದ್ದ ಪಶುಪಾಲನಾ ಇಲಾಖೆಯ ಅಧಿಕಾರಿಗಳೊಂದಿಗೆ ಕುರಿಗಾಹಿಗಳು ಮಾತಿನ ಚಕಮಕಿ ನಡೆಸಿದ ಘಟನೆ ಕೂಡ ನಡೆಯಿತು. ನಂತರ ಅವರನ್ನು ಮನವೊಲಿಸಿದ ಅಧಿಕಾರಿಗಳು, ಕುರಿಗಳ ಗಂಟಲು ದ್ರವದ ಮಾದರಿಯನ್ನು ತೆಗೆದರು.

ABOUT THE AUTHOR

...view details