ಕರ್ನಾಟಕ

karnataka

ETV Bharat / city

ಮೊಮ್ಮಗಳಿಗೆ ಹುಚ್ಚು ನಾಯಿ ಕಚ್ಚಿದರೂ ಅಜ್ಜಿ ನಿರ್ಲಕ್ಷ್ಯ.. ಆರೋಗ್ಯ ಹದಗೆಟ್ಟು 2 ವರ್ಷದ ಬಾಲಕಿ ವಿಧಿವಶ - tumkur dog bite case

ಹುಚ್ಚು ನಾಯಿ ಕಡಿದಿದ್ದ ಬಾಲಕಿಯ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಾಳೆ. ತುಮಕೂರು ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

girl died by dog bite in tumkur
ಹುಚ್ಚು ನಾಯಿ ಕಡಿದು ಬಾಲಕಿ ಸಾವು

By

Published : Mar 13, 2022, 5:28 PM IST

ತುಮಕೂರು: ಹುಚ್ಚು ನಾಯಿ ಕಡಿದು ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ. ತ್ರಿಶಾ (2) ಮೃತಪಟ್ಟ ಬಾಲಕಿ.

ತನ್ನ ಅಜ್ಜಿಯ ಜೊತೆ ತ್ರಿಶಾ ಹಸು ಮೇಯಿಸಲು ಹೊಲದ ಬಳಿ ತೆರಳಿದ್ದಳು. ಈ ವೇಳೆ ಹುಚ್ಚು ನಾಯಿಯೊಂದು ದಾಳಿ ಮಾಡಿತ್ತು. ನಾಯಿ ಕಚ್ಚಿದ್ದರಿಂದ ಏನೂ ಆಗುವುದಿಲ್ಲ ಎಂದು ಅಜ್ಜಿ ಜಯಮ್ಮ ಮನೆಯಲ್ಲಿ ಯಾರಿಗೂ ಹೇಳದೆ ನಿರ್ಲಕ್ಷ್ಯ ವಹಿಸಿದ್ದರು. ಆದ್ರೆ ಇದೇ ವೇಳೆ ಅಲ್ಲೇ ಇದ್ದ ಹಸುವನ್ನು ಕೂಡ ಆ ಹುಚ್ಚು ನಾಯಿ ಕಚ್ಚಿತ್ತು. ಹುಚ್ಚು ನಾಯಿ ಕಡಿದ ಮೂರೇ ದಿನಕ್ಕೆ ಹಸು ಮೃತಪಟ್ಟಿತ್ತು.

ಇದನ್ನೂ ಓದಿ:ಬೆಂಗಳೂರಲ್ಲಿ ಎನ್​​ಸಿಬಿ ಭರ್ಜರಿ ಬೇಟೆ.. ದಾರದ ಉಂಡೆಯಲ್ಲಿ ಸಪ್ಲೈ ಆಗ್ತಿದ್ದ ಡ್ರಗ್ಸ್​​ ಜಪ್ತಿ

ಇದರಿಂದ ಗಾಬರಿಗೊಂಡ ಜಯಮ್ಮ ಮನೆಯವರ ಬಳಿ ನಾಯಿ ಕಚ್ಚಿದ್ದನ್ನು ಹೇಳಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಬಾಲಕಿ ತ್ರಿಶಾ ಆರೋಗ್ಯ ಹದಗೆಟ್ಟಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೇ ತ್ರಿಶಾ ಕೂಡ ಮೃತಪಟ್ಟಿದ್ದಾಳೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details