ತುಮಕೂರು : ಗೂಡೌನ್‌ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ, ತೆಂಗಿನಕಾಯಿ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾದ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಗಂಗನಘಟ್ಟ ಗ್ರಾಮದಲ್ಲಿ ನಡೆದಿದೆ.
ಶಿವನಂಜಪ್ಪ ಎಂಬುವರಿಗೆ ಸೇರಿದ ಶೆಡ್ ಹಾಗೂ ನೆಲಮಾಳಿಗೆಯಲ್ಲಿ ಇದ್ದ 40,000 ತೆಂಗಿನಕಾಯಿ, 20,000 ಕೊಬ್ಬರಿ, ಅಲ್ಲದೆ ಸಮೀಪದಲ್ಲೇ 3 ಟ್ರ್ಯಾಕ್ಟರ್ ಲೋಡ್ ಹುಲ್ಲಿನ ಮೆದೆಗಳು ಹಾಗೂ 1 ಲಕ್ಷ ರೂಪಾಯಿ ಮೌಲ್ಯದ ಮರದ ಸಾಮಗ್ರಿಗಳು ಸುಟ್ಟು ಭಸ್ಮವಾಗಿದೆ ಎಂದು ಹೇಳಿದ್ದಾರೆ.