ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಕೆರೆಗಳ ಪಾಳ್ಯ ಸಮೀಪ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದವರನ್ನು ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಗಮನಿಸಿ ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಅಪಘಾತಕ್ಕೀಡಾಗಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಡಾ. ಪರಮೇಶ್ವರ್ - ತುಮಕೂರು ಜಿಲ್ಲೆಯ ಕೊರಟಗೆರೆ
ಬೆಂಗಾವಲು ವಾಹನದಲ್ಲಿ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿ ಡಾ.ಜಿ ಪರಮೇಶ್ವರ್ ಮಾನವೀಯತೆ ಮೆರೆದ್ದಾರೆ.
ಘಟನೆ ಹಿನ್ನೆಲೆ:ಜಿ.ಪರಮೇಶ್ವರ್ ಅವರು ನಿನ್ನೆ(ಶುಕ್ರವಾರ) ರಾತ್ರಿ ಮಧುಗಿರಿ ತಾಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗೊಂದಿಹಳ್ಳಿ, ಕೋಡ್ಲಾಪುರ ಸುತ್ತಮುತ್ತ ಕ್ಷೇತ್ರ ಪ್ರವಾಸ ಮುಗಿಸಿ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ, ಮಧುಗಿರಿ- ಕೊರಟಗೆರೆ ಮಾರ್ಗದ ಕೆರೆಗಳ ಪಾಳ್ಯ ಸಮೀಪದ ರಸ್ತೆಯಲ್ಲಿ ದ್ವಿಚ್ರಕ್ರ ವಾಹನ ಅಪಘಾತಕ್ಕೀಡಾಗಿತ್ತು. ಅದೇ ಮಾರ್ಗದಲ್ಲಿ ಚಲಿಸುತಿದ್ದ ಡಾ.ಜಿ ಪರಮೇಶ್ವರ್ ತಮ್ಮ ವಾಹನವನ್ನು ನಿಲ್ಲಿಸಿ ಗಾಯಾಳುಗಳನ್ನು ತಮ್ಮ ಬೆಂಗಾವಲು ವಾಹನದಲ್ಲಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 8 ಮಂದಿ ದುರ್ಮರಣ