ಕರ್ನಾಟಕ

karnataka

ETV Bharat / city

ತುಮಕೂರು ಜಿಲ್ಲೆಯಲ್ಲಿ ಕೊರೊನಾ ಕುರಿತ ಈ ದಿನದ ಮಾಹಿತಿ

ಕೋವಿಡ್-19 ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 69 ಮಂದಿಯ ರಕ್ತ ಮತ್ತು ಕಫದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

covid 19 in tumakuru 69 people testing pending
ಕೋವಿಡ್19: ತುಮಕೂರು ಜಿಲ್ಲೆಯಲ್ಲಿ 69 ಮಂದಿಯ ಪರೀಕ್ಷಾ ವರದಿ ಬಾಕಿ

By

Published : Apr 12, 2020, 9:10 PM IST

ತುಮಕೂರು:ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 69 ಮಂದಿಯ ರಕ್ತ ಮತ್ತು ಕಫದ ಸ್ಯಾಂಪಲ್​​ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಇಂದು 14 ಮಂದಿಯನ್ನ ಆಸ್ಪತ್ರೆಯ ಐಸೋಲೇಷನ್​ನಲ್ಲಿಡಲಾಗಿದ್ದು, ಇವರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ಮಾಹಿತಿ ನೀಡಿ, ಈವರೆಗೆ 308 ಶಂಕಿತರ ರಕ್ತ ಮತ್ತು ಕಫದ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಯಾಂಪಲ್​​ಗಳ ವರದಿಯಲ್ಲಿ 233 ನೆಗೆಟಿವ್ ಬಂದಿವೆ ಎಂದು ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ 69 ಮಂದಿಯ ಪರೀಕ್ಷಾ ವರದಿ ಬಾಕಿ

ಇದುವರೆಗೆ 480 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. 100 ಮಂದಿ ಹೋಂ ಕ್ವಾರಂಟೈನ್​​ನಲ್ಲಿದ್ದಾರೆ. 270 ಮಂದಿಯು 28 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 239 ಮಂದಿಯ ಸ್ಯಾಂಪಲ್​​ಗಳನ್ನು ಟೆಸ್ಟ್ ಮಾಡಲಾಗಿತ್ತು. ಇದುವರೆಗೆ ಇಬ್ಬರು ವ್ಯಕ್ತಿಗಳಲ್ಲಿ ಪಾಸಿಟಿವ್ ಬಂದಿತ್ತು. ಅದರಲ್ಲಿ ಸಿರಾ ಪಟ್ಟಣದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details