ತುಮಕೂರು: ಮಕ್ಕಳಾಗದಿರುವ ಬಗ್ಗೆ ಪದೇಪದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಕುಮಾರ್ ಎಂಬಾತ ಕೊಲೆಯಾದ ವ್ಯಕ್ತಿ. ಜೂನ್ 20ರಿಂದ ಮನೆಗೆ ಬಾರದೆ ಕುಮಾರ್ ಕಾಣೆಯಾಗಿದ್ದ. ಜೂನ್ 23ರಂದು ಕುಮಾರ್ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಾಯಸಂದ್ರದ ಬಳಿಯ ಜೋಡಘಟ್ಟೆಯ ಸಂತೆ ಮೈದಾನದ ಬಳಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಾಕಳಿಯ ಹೆಗ್ಗಡೆ ದೇವನಪುರದ ನಿವಾಸಿ ಪುನೀತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಕುಮಾರ್ ಪದೇಪದೆ ನನಗೆ ಮಕ್ಕಳಾಗದಿರುವ ಬಗ್ಗೆ ನಿಂದಿಸುತ್ತಿದ್ದನು. ಅಲ್ಲದೆ, ನಮ್ಮ ಸಂಬಂಧಿಕರ ಮೇಲೆ ಕಳ್ಳತನದ ಆರೋಪ ಹೊರಿಸಿದ್ದನು. ಹೀಗಾಗಿ, ಮಾನಸಿಕವಾಗಿ ನಾನು ನೊಂದಿದ್ದೆ.
ಕುಮಾರ್ಗೆ ವಿಪರೀತ ಮದ್ಯಪಾನ ಮಾಡಿಸಿ ಕೊಲೆ ಮಾಡಿರುವುದಾಗಿ ಆರೋಪಿ ಪುನೀತ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೊಲೆ ಆರೋಪಿಯನ್ನು ಬಂಧಿಸಲು ತುರುವೇಕೆರೆ ಸಿಪಿಐ ನವೀನ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಇದನ್ನೂ ಓದಿ:ನಕಲಿ ದಾಖಲೆ ಸೃಷ್ಟಿಸಿ 1 ಕೋಟಿಗೂ ಹೆಚ್ಚು ಸಾಲ ಪಡೆದು ಪಂಗನಾಮ: 15 ಮಂದಿ ಅರೆಸ್ಟ್