ಕರ್ನಾಟಕ

karnataka

ETV Bharat / city

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಆರೋಪ : ಪೊಲೀಸ್ ಕಾನ್ಸ್​ಟೇಬಲ್ ಬಂಧನ - A police constable arrested for attempt rape a woman

ತಿಂಡಿ ತಿನ್ನುವ ನೆಪದಲ್ಲಿ ಹೋಟೆಲ್ ಬಳಿ ಬಂದಿದ್ದ ಪೊಲೀಸ್ ಕಾನ್ಸ್ ಟೇಬಲ್​ ಮಂಜುನಾಥ್, ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಕ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನ ಬಂಧಿಸಿ, ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಪೊಲೀಸ್ ಕಾನ್ಸ್​ಟೇಬಲ್ ಬಂಧನ
ಪೊಲೀಸ್ ಕಾನ್ಸ್​ಟೇಬಲ್ ಬಂಧನ

By

Published : Jul 1, 2022, 12:49 PM IST

ತುಮಕೂರು: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಜೈಲು ಸೇರಿದ್ದಾರೆ. ತಿಪಟೂರು ತಾಲೂಕಿನ ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್ ಮಂಜುನಾಥ್ (ಮಿಲ್ಟಿ) ಬಂಧಿತ ಸಿಬ್ಬಂದಿ.

ಜೂ.28ರಂದು ಬೆಳಗ್ಗೆ 10 ಗಂಟೆಗೆ ಹೋಟೆಲ್​ಗೆ ತಿಂಡಿ ತಿನ್ನಲು ಹೋಗಿದ್ದ ಕಾನ್ಸ್‌ಟೇಬಲ್ ಮಂಜುನಾಥ್, ಹೋಟೆಲ್‌ನಲ್ಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ, ಸ್ಥಳೀಯರ ನೆರವಿನಿಂದ ಮಹಿಳೆ ಪಾರಾಗಿದ್ದಾರೆ. ಬಳಿಕ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ದೂರಿನ ಮೇರೆಗೆ ಕಾನ್ಸ್‌ಟೇಬಲ್ ಮಂಜುನಾಥ್ ಬಂಧಿಸಿ, ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಐಪಿಸಿ ಸೆಕ್ಷನ್‌ 353(a), 354(b), 448, 506, 509ರಡಿ ಕೇಸ್‌ ದಾಖಲಾಗಿದೆ.

ಬಂಧಿತ ಪೊಲೀಸ್ ಕಾನ್ಸ್​ಟೇಬಲ್ ಮಂಜುನಾಥ್

ಇದನ್ನೂ ಓದಿ:ಕೈ - ಕಾಲು ಕಟ್ಟಿ ಹಾಕಿರುವ ತಂದೆ ಫೋಟೋ ಮಗನಿಗೆ ವಾಟ್ಸ್​ಆ್ಯಪ್​: 15 ಲಕ್ಷ ಬೇಡಿಕೆಯಿಟ್ಟ ಅಪಹರಣಕಾರರು!

ABOUT THE AUTHOR

...view details