ಕರ್ನಾಟಕ

karnataka

ETV Bharat / city

ವಿರೋಧದ ನಡುವೆಯೂ ಪ್ರೇಮ ವಿವಾಹ: ರೊಚ್ಚಿಗೆದ್ದ ಪೋಷಕರಿಂದ 250 ಅಡಿಕೆ ಮರಗಳಿಗೆ ಕೊಡಲಿ ಪೆಟ್ಟು

ವಿರೋಧದ ನಡುವೆಯೂ ಯುವಜೋಡಿಯೊಂದು ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಹುಡುಗಿ ಮನೆಯುವರು ಹುಡುಗನ ಮನೆಯವರ 250 ಅಡಿಕೆ ಮರಗಳನ್ನು ಕಡಿದು ಹಾಕಿರುವ ಆರೋಪ ಕೇಳಿಬಂದಿದೆ.

250 nut trees cut down in tumkur
250 ಅಡಿಕೆ ಮರಗಳಿಗೆ ಕೊಡಲಿ ಏಟು

By

Published : Feb 4, 2021, 1:20 PM IST

ತುಮಕೂರು: ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಹಿನ್ನೆಲೆ ಹುಡುಗನ ಮನೆಯವರ ಅಡಿಕೆ ಗಿಡಗಳನ್ನು ಹುಡುಗಿ ಮನೆಯವರು ಕಡಿದು ಹಾಕಿರುವ ಆರೋಪ ಪ್ರಕರಣ ತಾಲೂಕಿನ ಮಲ್ಲಸಂದ್ರಪಾಳ್ಯದಲ್ಲಿ ನಡೆದಿದೆ.

ಮಲ್ಲಸಂದ್ರಪಾಳ್ಯ ಗ್ರಾಮದ ರವಿಚಂದ್ರ ಹಾಗೂ ಅನು ಎಂಬುವರು ಪರಸ್ಪರ ಪ್ರೀತಿಸಿ ಕಳೆದ ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದರು. ಇವರ ಪ್ರೇಮ ವಿವಾಹಕ್ಕೆ ಹುಡುಗಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಪೋಷಕರ ವಿರೋಧದ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಹುಡುಗಿ ಮನೆಯವರು ರವಿಚಂದ್ರನಿಗೆ ಸೇರಿದ 250 ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ಹುಡುಗನ ಮನೆಯವರು ಆರೋಪಿಸಿದ್ದಾರೆ.

ಮಲ್ಲಸಂದ್ರಪಾಳ್ಯದಲ್ಲಿ 250 ಅಡಿಕೆ ಮರಗಳಿಗೆ ಕೊಡಲಿ ಏಟು

ಅನು ಪೋಷಕರಾದ ಸಂತೋಷ ಹಾಗೂ ಗಂಗಮ್ಮ ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

...view details