ಕರ್ನಾಟಕ

karnataka

ETV Bharat / city

ಶಿವಮೊಗ್ಗ ಜಿಲ್ಲೆಯಲ್ಲಿ 2 ಪ್ರತ್ಯೇಕ ಪೋಕ್ಸೋ ಪ್ರಕರಣ ದಾಖಲು - Two separate Pocso cases registered in shivamogga

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಪ್ರತ್ಯೇಕ ಎರಡು ಪೋಕ್ಸೋ ಪ್ರಕರಣ ದಾಖಲಾಗಿವೆ.

Shivamogga
ಶಿವಮೊಗ್ಗ

By

Published : Feb 5, 2022, 1:05 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಪ್ರತ್ಯೇಕ ಎರಡು ಪೋಕ್ಸೋ ಪ್ರಕರಣ ದಾಖಲಾಗಿವೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿಯಲ್ಲಿ ಅನ್ಯ ಕೋಮಿನ ಯುವಕ ಅಪ್ರಾಪ್ತೆಗೆ ಪ್ರೀತಿಸುವುದಾಗಿ ಹೇಳಿ ಅವಳೂಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈತ ಅಪ್ರಾಪ್ತೆಯ ಪೋಷಕರು ಕೆಲಸ ಮಾಡುವ ಜಾಗದಲ್ಲಿಯೇ ಗಾರೆ ಕೆಲಸ ಮಾಡುತ್ತಿದ್ದನಂತೆ. ಈ ವೇಳೆ ಬಾಲಕಿಯ ಪರಿಚಯವಾಗಿ ಪ್ರೀತಿಸುವುದಾಗಿ ಹೇಳಿ, ದೈಹಿಕ‌ ಸಂಪರ್ಕ ಬೆಳೆಸಿದ್ದನಂತೆ.

ಬಾಲಕಿಯ ದೇಹದಲ್ಲಿ ಆದ ಬದಲಾವಣೆ ಕಂಡ ಪೋಷಕರು ಪ್ರಶ್ನೆ ಮಾಡಿದಾಗ ಆಕೆ ಅನ್ಯ ಕೋಮಿನ ಯುವಕನ ಕುರಿತು ತಿಳಿಸಿದ್ದಾಳೆ. ನಂತರ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಬಾಲಕಿ ಗರ್ಭಿಣಿ ಎಂದು ತಿಳಿದು ಬಂದಿದೆ. ಈ ಸಂಬಂಧ ಅನ್ಯ ಕೋಮಿನ ಯುವಕನ ವಿರುದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹಾಫ್ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರನಿಂದ ಹಣ ವಸೂಲಿ ವಿಡಿಯೋ ವೈರಲ್: ಕಾನ್ಸ್​ಟೇಬಲ್​​ ಅಮಾನತು

ನಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ವ್ಯಕ್ತಿಯ ವಿರುದ್ಧ ಯುವತಿಯ ಪೋಷಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ಬಿ.ಹೆಚ್.ರಸ್ತೆಯ ಸ್ಪೋರ್ಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಪ್ರೀತಿಸುವುದಾಗಿ ಹೇಳಿ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿಯ ತಂದೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details