ಶಿವಮೊಗ್ಗ: ಮನೆ ದೋಚುತ್ತಿದ್ದ ಕಳ್ಳನನ್ನು ಬಂಧಿಸಿ, ಆತನಿಂದ 18 ಗ್ರಾಂ ಚಿನ್ನಾಭರಣ ಹಾಗೂ 2.12 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗದಲ್ಲಿ ಮನೆಗಳ್ಳನ ಬಂಧನ: 18.92 ಗ್ರಾಂ ಚಿನ್ನಾಭರಣ, 2.12 ಲಕ್ಷ ರೂ. ನಗದು ವಶ - ಮನೆಗಳ್ಳನ ಬಂಧನ
ಶಿವಮೊಗ್ಗದ ವಿದ್ಯಾನಗರದ ನಿವಾಸಿ ಕೆಂಚಪ್ಪ ಎಂಬುವರ ಮನೆ ಕಳ್ಳತನವಾಗಿತ್ತು. ಈ ಸಂಬಂಧ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ವಸಂತರಾಜು ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಿದ್ದಾರೆ. ಈ ವೇಳೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಭದ್ರಾವತಿ ಬೋವಿ ಕಾಲೊನಿಯ ವಸಂತರಾಜು ಬಂಧಿತ ಆರೋಪಿ. ಶಿವಮೊಗ್ಗದ ವಿದ್ಯಾನಗರದ ನಿವಾಸಿ ಕೆಂಚಪ್ಪ ಎಂಬುವರ ಮನೆ ಕಳ್ಳತನವಾಗಿತ್ತು. ಈ ಸಂಬಂಧ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ವಸಂತರಾಜು ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಈತ ಕೆಂಚಪ್ಪನವರ ಮನೆಯಲ್ಲಿ 18 ಗ್ರಾಂ ಚಿನ್ನಾಭರಣ ಹಾಗೂ 2.30 ಲಕ್ಷ ರೂ. ನಗದು ಕದ್ದಿದ್ದ. ಸದ್ಯ ಕೋಟೆ ಪೊಲೀಸರು 18.92 ಗ್ರಾಂ ಚಿನ್ನಾಭರಣ ಹಾಗೂ 2.12 ಲಕ್ಷ ರೂ. ನಗದು, ಒಂದು ಮೊಬೈಲ್ ಹಾಗೂ ಒಂದು ಬೈಕ್ ಅನ್ನು ಆರೋಪಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ.