ಶಿವಮೊಗ್ಗ : ಕೊರೊನಾ ಸೋಂಕಿತ ಗರ್ಭಿಣಿಗೆ ಸಿಜೇರಿಯನ್ ಮಾಡುವ ಮೂಲಕ ಹೆರಿಗೆ ಮಾಡಿಸುವಲ್ಲಿ ಸಾಗರ ವೈದ್ಯರ ತಂಡ ಯಶಸ್ವಿಯಾಗಿದೆ.
ಸಾಗರದ 25 ವರ್ಷದ ಸೋಂಕಿತ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿದ ಹಿನ್ನೆಲೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಸಿಜೇರಿಯನ್ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು.
ಪ್ರಸೂತಿ ತಜ್ಞ ಡಾ.ನಾಗೇಂದ್ರಪ್ಪ, ಅರವಳಿಕೆ ತಜ್ಞ ಡಾ.ಸುರೇಶ್ ಅವರ ತಂಡ ಯಶಸ್ವಿ ಆಪರೇಷನ್ ನಡೆಸಿ ಮಗು ಹಾಗೂ ತಾಯಿಯ ಪ್ರಾಣ ಉಳಿಸಿದ್ದಾರೆ.
ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಕೋವಿಡ್ ಮೊದಲ ಅಲೆಯಲ್ಲಿ ಸೋಂಕಿತ ಗರ್ಭಿಣಿಯರಿಗೆ ಸಾಗರದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿರಲಿಲ್ಲ. ಸದ್ಯ ಶಾಸಕ ಹರತಾಳು ಹಾಲಪ್ಪನವರ ಸೂಚನೆ ಮೇರೆಗೆ ಸಾಗರದಲ್ಲಿಯೇ ಆಪರೇಷನ್ ನಡೆಸಲಾಗುತ್ತಿದೆ.