ಕರ್ನಾಟಕ

karnataka

By

Published : Nov 15, 2019, 9:00 AM IST

ETV Bharat / city

ಗಣಿಗಾರಿಕೆ ಲಾರಿಗಳಿಂದ ಹಾಳಾದ ರಸ್ತೆ: ಪ್ರತಿಭಟನೆ ನಡೆಸಿದ ಗ್ರಾಮಸ್ಥರು

ಹೊಸನಗರ ತಾಲೂಕಿನ ಸುತ್ತಾ ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗಿವೆ ಎಂದು ಸ್ಥಳೀಯರು 50 ಕ್ಕೂ‌ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ಲಾರಿಗಳಿಂದ ಹಾಳಾದ ರಸ್ತೆ: ಪ್ರತಿಭಟನೆ ನಡೆಸಿದ ಗ್ರಾಮಸ್ಥರು

ಶಿವಮೊಗ್ಗ: ಹೊಸನಗರ ತಾಲೂಕಿನ ಸುತ್ತಾ ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗಿವೆ ಎಂದು ಆರೋಪಿಸಿ ಸ್ಥಳೀಯರು 50 ಕ್ಕೂ‌ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ-ಕುಂದಾಪುರ ರಸ್ತೆಗೆ ಬರಬೇಕು ಅಂದ್ರೆ ಸುತ್ತಾ ಹಾಗೂ ಕುಂಬತ್ತಿ ಗ್ರಾಮದಿಂದಲೇ ಸಾಗಬೇಕು. ಇದರಿಂದ ರಸ್ತೆಗಳು ಗುಂಡಿ ಬಿದ್ದು ಶಾಲಾ ಮಕ್ಕಳು‌ ವೃದ್ದರು‌ ಸಾಗದ ಸ್ಥಿತಿ‌ ನಿರ್ಮಾಣವಾಗಿದೆ. ಹಿಂದೆ ಸುತ್ತಾ ಗ್ರಾಮದಿಂದ ಶರಾವತಿ ಹಿನ್ನೀರಿನಲ್ಲಿ ಬ್ರಿಟಿಷ್ ಕಾಲದ ಸೇತುವೆ ಮೂಲಕ ಲಾರಿಗಳು ಮುಖ್ಯ ರಸ್ತೆಗೆ ತಲುಪುತ್ತಿದ್ದವು. ಈಗ ಮಳೆಯಿಂದ ಸೇತುವೆ ಮುಳುಗಡೆಯಾಗಿದ್ದು, ಲಾರಿಗಳು ಗ್ರಾಮಗಳಲ್ಲಿಯೇ ಓಡಾಡಬೇಕಿದೆ.

ಗ್ರಾಮಸ್ಥರು ನಮಗೆ ರಸ್ತೆ ಉಳಿಸಿ ಕೊಡಿ ಎಂದು ಆಗ್ರಹಿಸಿ ಲಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಲ್ಲು ಕ್ವಾರಿ ಮಾಲೀಕರು ಬೇರೆ ಮಾರ್ಗ ಮಾಡುವುದಾಗಿ ಭರವಸೆ ನೀಡಿದ ಪರಿಣಾಮ ಲಾರಿಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.

ABOUT THE AUTHOR

...view details