ಶಿವಮೊಗ್ಗ:ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರ ವಿರುದ್ಧ ಆಡಳಿತ ಮಂಡಳಿಯೇ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ. ಜೆಡಿಎಸ್ನ ದುಗ್ಗಪ್ಪ ಗೌಡರ ಭ್ರಷ್ಟಚಾರ ಹಾಗೂ ಏಕಪಕ್ಷೀಯ ಧೋರಣೆ ಆರೋಪ ಹಿನ್ನೆಲೆ ಅವಿಶ್ವಾಸ ಮಂಡನೆ ಮಾಡಲಾಗಿದೆ.
ಎಪಿಎಂಸಿಯಲ್ಲಿ ಒಟ್ಟು 17 ಸದಸ್ಯರಿದ್ದು, ಆಯನೂರಿನ ಭಾಗ್ಯ ಎಂಬುವವರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ಇದರಿಂದ 16 ಸದಸ್ಯರಿಗೆ ಮತದಾನದ ಅವಕಾಶವಿತ್ತು. ಆದರೆ ಅವಿಶ್ವಾಸ ನಿರ್ಣಯ ಮಂಡನೆಯಾಗುವ ಸುಳಿವಿದ್ದ ಹಾಲಿ ಉಪಾಧ್ಯಕ್ಷ ಬಾಬು ಮತದಾನ ಪ್ರಕ್ರಿಯೆಗೆ ಗೈರಾಗಿದ್ದು, 15 ಸದಸ್ಯರು ಮತದಾನ ಮಾಡಿದ್ದರು.