ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆಯ ಈಜುಗಾರರು ಮುಂದಿನ ವರ್ಷ ಜಪಾನ್ನಲ್ಲಿ ನಡೆಯುವ ಈಜು ಸ್ಪರ್ಧೆಗೆ ತೆರಳಲಿದ್ದಾರೆ. ಹೌದು, ಶಿವಮೊಗ್ಗದ ದೀಪಕ್, ರೇಖಾ, ಡಾ. ವಿದ್ಯಾ ರಮೇಶ್ ಹಾಗೂ ಸಂಗಮೇಶ್ ಎಂಬುವವರು ಜಪಾನ್ನಲ್ಲಿ ನಡೆಯುವ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸ್ಪರ್ಧೆಗೆ ತಯಾರಿ ಜೋರು:
ಜಪಾನ್ ಈಜು ಸ್ಪರ್ಧೆಯು ಅಂತಾರಾಷ್ಟ್ರೀಯ ಮಟ್ಟದಾಗಿದೆ. ಈ ಈಜು ಸ್ಪರ್ಧೆಯು ಒಲಿಪಿಂಕ್ ಮಾದರಿಯಲ್ಲಿರಲಿದ್ದು, 5 ವರ್ಷಕ್ಕೊಮ್ಮೆ ನಡೆಯುವ ಸ್ಪರ್ಧೆ ಆಗಿರುತ್ತದೆ. ಸ್ಪರ್ಧೆಗೆ ಶಿವಮೊಗ್ಗ ಜಲ್ಲೆಯಿಂದ ನಾಲ್ಕು ಜನ ಆಯ್ಕೆಯಾಗಿದ್ದಾರೆ. ಇದರಲ್ಲಿ ದೀಪಕ್ ಹಾಗೂ ರೇಖಾ ದಂಪತಿ, ಸಂಗಮೇಶ್ ಸ್ವಿಮ್ಮರ್ ಕೋಚ್ ಆಗಿದ್ದು, ವಿದ್ಯಾ ರಮೇಶ್ ಎಂಬುವವರು ವೈದ್ಯರಾಗಿದ್ದಾರೆ. ಹೀಗೆ ನಾಲ್ಕು ಜನರು ವಿವಿಧ ಕ್ಷೇತ್ರದಲ್ಲಿ ತೂಡಗಿಸಿಕೊಂಡಿದ್ದು, ಇದೀಗ ನಾಲ್ವರು ಒಟ್ಟಿಗೆ ಅಭ್ಯಾಸ ಮಾಡುತ್ತಾರೆ.
ಬೆಳಗ್ಗೆ ಎರಡೂವರೆ ಗಂಟೆ, ಸಂಜೆ ಎರಡೂವರೆ ಗಂಟೆ ಅಭ್ಯಾಸ ನಡೆಸುತ್ತಾರೆ. ಸದ್ಯ ಇನ್ನಷ್ಟು ಅಭ್ಯಾಸ ಹೆಚ್ಚು ಮಾಡುವ ಉದ್ದೇಶವನ್ನು ಈ ಈಜುಪಟುಗಳು ಹೊಂದಿದ್ದಾರೆ. ಈ ಪಟುಗಳು ಬೇರೆ ಬೇರೆ ವೃತ್ತಿಯಲ್ಲಿದ್ದರೂ ಸಹ ಈಜು ಕಲಿಯಲು ಬಂದಾಗ ಸ್ನೇಹಿತರಾದವರು.
ಮುಂದಿನ ಮಾರ್ಚ್ನಲ್ಲಿ ನಡೆಯುತ್ತೆ ಈಜು ಸ್ಪರ್ಧೆ:
ಜಪಾನ್ನಲ್ಲಿ ಮುಂದಿನ ಮಾರ್ಚ್ನಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಇವರು ಫ್ರೀ ಸ್ಟೈಲ್, ಬ್ರೆಸ್ಟ್ ಸ್ಟ್ರೋಕ್ ಹಾಗೂ ಬಟರ್ ಫ್ಲೈ ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಈ ಸ್ಪರ್ಧೆಯು 30 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಇರುವುದರಿಂದ ಈ ಸ್ಪರ್ಧೆಗೆ ಸುಮಾರು 2 ಲಕ್ಷದಷ್ಟು ಜನರು ಭಾಗಿಯಾಗುವ ಸಾಧ್ಯತೆಗಳಿವೆ. ಇಂತಹ ಕಠಿಣ ಸವಾಲನ್ನು ಎದುರಿಸಲು ಶಿವಮೊಗ್ಗದ ಈ ಈಜುಪಟುಗಳು ಕಷ್ಟಪಟ್ಟು ತರಬೇತಿ ಪಡೆಯುತ್ತಿದ್ದಾರೆ. ನಾಲ್ವರ ತಂಡದಲ್ಲಿ ಸ್ವಿಮ್ಮರ್ - ಕೋಚರ್ ಸಂಗಮೇಶ್ ಇರುವುದರಿಂದ ಉಳಿದ ಸ್ವಿಮ್ಮರ್ಸ್ಗಳು ಸ್ವಲ್ಪ ಕಷ್ಟಪಟ್ಟೇ ತಯಾರಿ ನಡೆಸುತ್ತಿದ್ದಾರೆ.