ಶಿವಮೊಗ್ಗ: ಕುಖ್ಯಾತ ರೌಡಿ ಹಂದಿ ಅಣ್ಣಿಯನ್ನು ಇಲ್ಲಿನ ಮುಖ್ಯವೃತ್ತದಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ವಿನೋಬನಗರದ ಚೌಕಿ ವೃತ್ತದಲ್ಲಿ ಹಂದಿ ಅಣ್ಣಿ ಸ್ಕೂಟರ್‌ನಲ್ಲಿ ಬರುತ್ತಿರುವಾಗ ಇನೋವಾ ಕಾರಿನಿಂದ ಅಡ್ಡಗಟ್ಟಿದ ಐದಾರು ಜನರ ಗುಂಪು ನಿರ್ದಯವಾಗಿ ಹತ್ಯೆ ಮಾಡಿದೆ. ಬೆಳಗ್ಗೆ 10:40 ರ ಸುಮಾರಿಗೆ ಘಟನೆ ನಡೆದಿದೆ.
ಶಿವಮೊಗ್ಗ: ನಡು ರಸ್ತೆಯಲ್ಲೇ ಕುಖ್ಯಾತ ರೌಡಿ ಹಂದಿ ಅಣ್ಣಿ ಬರ್ಬರ ಕೊಲೆ - ಶಿವಮೊಗ್ಗದಲ್ಲಿ ರೌಡಿ ಹಂದಿ ಅಣ್ಣಿ ಹತ್ಯೆ
ಬೆಳ್ಳಂಬೆಳಗ್ಗೆಯೇ ಶಿವಮೊಗ್ಗದಲ್ಲಿ ನೆತ್ತರು ಹರಿದಿದೆ. ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿಯನ್ನು ಬರ್ಬರವಾಗಿ ನಡು ರಸ್ತೆಯಲ್ಲೇ ಕೊಲೆ ಮಾಡಲಾಗಿದೆ.
ಇದನ್ನೂ ಓದಿ:ಉದಯ್ಪುರ ಹತ್ಯೆ ಕೇಸ್: ಇಸ್ಲಾಮಿ ಸಂಘಟನೆಯ 40 ಜನರಿಗಾಗಿ NIA ಶೋಧ.. ಪಾಕ್ನಿಂದ ಆನ್ಲೈನ್ ತರಬೇತಿ
ಹಂದಿ ಅಣ್ಣಿಯು ಲವ-ಕುಶ ಎಂಬ ಅವಳಿ ಸಹೋದರರನ್ನು ಸಾಗರ ರಸ್ತೆಯಲ್ಲಿ 12 ವರ್ಷಗಳ ಹಿಂದೆ ಕೊಲೆ ಮಾಡಿದ್ದ. ಈ ಮುಖೇನ ಪಾತಕ ಲೋಕ ಪ್ರವೇಶಿಸಿದ್ದ. ಇಂದು ಆತನೇ ಕೊಲೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಆತನ ತಾಯಿ ಹಾಗೂ ಸಹೋದರರು ಆಗಮಿಸಿ ರೋಧಿಸುತ್ತಾ, ಪೊಲೀಸ್ ಇಲಾಖೆ ಹಾಗೂ ದುಷ್ಕರ್ಮಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಣ್ಣಿಯ ಶವವನ್ನು ಮೆಗ್ಗಾನ್ ಶವಾಗಾರಕ್ಕೆ ರವಾನಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.