ಶಿವಮೊಗ್ಗ: ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಅಪ್ರಾಪ್ತನನ್ನು ಬಂಧಿಸಿ, 200 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ : ಅಪ್ರಾಪ್ತನ ಸಮೇತ 200 ಗ್ರಾಂ ಗಾಂಜಾ ವಶಕ್ಕೆ - one arrested with marijuana
ಆರೋಪಿಯನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಗಾಂಜಾ ವಶಕ್ಕೆ
ವೆಂಕಟೇಶ ನಗರದ ಸಮುದಾಯ ಭವನದ ಎದುರು ಅಪ್ರಾಪ್ತನೋರ್ವ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಸುಮಾರು 7 ಸಾವಿರ ಮೌಲ್ಯದ 28 ಪ್ಯಾಕೇಟ್ ಗಾಂಜಾ, ಎರಡು ಮೊಬೈಲ್ ಹಾಗೂ 550 ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ವೇಳೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿ ರುದ್ರೇಶ್ ಕೆ ಪಿ, ಶ್ರೀಮತಿ ಶಕುಂತಲಾ, ಶ್ರೀ ರಮೇಶ್ ಎಸ್, ರಾಘವೇಂದ್ರ, ಸಂತೋಷ್ ವಿ. ಸಂತೋಷ್, ಟಿ ಸತೀಶ್ ಹಾಜರಿದ್ದರು.