ಕರ್ನಾಟಕ

karnataka

ETV Bharat / city

ಬೈಕ್​ನಲ್ಲಿ ಬಂದ ಅಪರಿಚಿತರಿಂದ ಯುವಕನಿಗೆ ಚಾಕು ಇರಿತ!

ಬೈಕ್​ನಲ್ಲಿ ಬಂದ ಅಪರಿಚಿತರು ಯುವಕನಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

knife stab to man by unknown persons
ಬೈಕ್​ನಲ್ಲಿ ಬಂದ ಅಪರಿಚಿತರಿಂದ ಯುವಕನಿಗೆ ಚಾಕು ಇರಿತ

By

Published : Dec 31, 2019, 9:21 PM IST

ಶಿವಮೊಗ್ಗ: ಬೈಕ್​ನಲ್ಲಿ ಬಂದ ಅಪರಿಚಿತರು ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.

ಭದ್ರಾವತಿಯ ಭೂತನಗುಡಿಯ ಯುವಕ ಹಡಮ್ ಸಿಂಗ್(30) ಎಂಬ ಯುವಕನಿಗೆ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ನಿನ್ನೆ ತಡರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾತ್ರಿ ಹಾರ್ಡ್‌ವೇರ್ ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದಾಗ ಬೈಕ್​ನಲ್ಲಿ ಬಂದ ಅಪರಿಚಿತರು ಯುವಕನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ. ಹಲ್ಲೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಬೈಕ್​ನಲ್ಲಿ ಬಂದ ಅಪರಿಚಿತರಿಂದ ಯುವಕನಿಗೆ ಚಾಕು ಇರಿತ

ಗಾಯಳು ಹಡಮ್ ಸಿಂಗ್​ನನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details